ಧಾರವಾಡ : ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ವೇಳೆ ಉಂಟಾದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಇಡೀ ದೇಶದಲ್ಲಿ ಛತ್ರಪತಿ ಶಿವಾಜಿ ಜಯಂತಿ ವಿಜೃಂಭಣೆಯಿಂದ ನಡೆದಿದೆ. ಇದು ಹಿಂದೂ ಸಮಾಜಕ್ಕೆ ಪ್ರೇರಣೆಯಾಗುವ ಜಯಂತಿ. ಹಿಂದೂಗಳು ಉಳಿದಿದ್ರೆ, ಹಿಂದೂಸ್ತಾನ್ ಉಳದಿದ್ರೆ ಅದು ಛತ್ರಪತಿ ಶಿವಾಜಿಯಿಂದ. ಇಂತ ವ್ಯಕ್ತಿಯ ಮೆರವಣಿಗೆ ಬಾಗಲಕೋಟೆ ನಗರದಲ್ಲಿನ ಮಸೀದಿ ಎದುರು ಬಂದಾಗ ಕಲ್ಲು, ಚಪ್ಪಲಿ ಎಸೆದಿದ್ದಾರೆ. ಇದೊಂದು ಅತ್ಯಂತ ಹೀನವಾದ ಕೃತ್ಯ, ದೇಶ ದ್ರೋಹ ಕೃತ್ಯ. ಇದು ಛತ್ರಪತಿ ಗೆ ಕಲ್ಲು ಎಸೆದಿದ್ದಲ್ಲ, ಹಿಂದೂಗಳಿಗೆ ಎಸೆದದ್ದು. ಈ ರೀತಿಯ ಮಾನಸಿಕತೆ ವಿರುದ್ಧ ಹೋರಾಡಬೇಕಿದೆ ಎಂದು ಗುಡುಗಿದ್ದಾರೆ.
ಕಲ್ಲು ಎಸ್ಪಿ ಮೇಲೆ ಬಿದ್ದಿದೆ. ಆದ್ರೆ ಕಲ್ಲು ಬಿದ್ದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಇದಕ್ಕೆಲ್ಲಾ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಹೊಣೆ. ಜಿಹಾದಿಗಳಿಗೆ ಅವರು ಕೊಟ್ಟಿರುವ ಕುಮ್ಮಕ್ಕಿನಿಂದ ಇಂತಹ ಘಟನೆಗಳು ನಡೆಯುತ್ತಿವೆ. ಶಿವಾಜಿ ಮಹಾರಾಜರ ಮೇಲೆ ಕಲ್ಲು, ಚಪ್ಪಲಿ ಎಸೆಯುವುದು ಅಂದರೆ ಏನು? ಎಂತಹ ದ್ರೋಹಿಗಳು ಇರಬಹುದು ಅವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲೆಸೆಯುವಂತ ಕೈಗಳಿಗೆ ಬಲ ಕೊಟ್ಟಿದ್ದೆ ಹಿಂದೂ ಸಮಾಜ. ಶಿವಾಜಿಗೆ ಅವಮಾನವಾದರೆ ಹಿಂದೂ ಸಮಾಜಕ್ಕೆ ಅವಮಾನವಾದಂತೆ. ದೇಶಕ್ಕೆ ಅವಮಾನವಾದಂತೆ. ಇದನ್ನು ಇಡೀ ಹಿಂದೂ ಸಮಾಜ ಖಂಡಿಸಬೇಕು. ವಿರೋಧಿಸಬೇಕು. ಜಿಹಾದಿ ಮಾನಸಿಕತೆ ಕಲ್ಲು ಎಸೆಯವ ಮಾನಸಿಕತೆಗೆ ಬಹಿಷ್ಕಾರ ಹಾಕಬೇಕು. ಇದು ಹೀನ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ | ನಿಷೇಧಾಜ್ಞೆ ಜಾರಿ



















