ಚಿಕ್ಕೋಡಿ: ಆನೆಯೊಂದು ತನ್ನನ್ನು ಸಾಕುತ್ತಿದ್ದ ಮಾವುತನನ್ನು ಬಲಿ ಪಡೆದ ಘಟನೆ ನಡೆದಿದೆ.
ತಾನೇ ಸಾಕಿ ಸಲುಹುತ್ತಿದ್ದ ಮಾವುತನನ್ನು ಆನೆ (Elephant) ಸೊಂಡಿಲಿನಿಂದ ತಿವಿದು ಕೊಲೆ ಮಾಡಿದೆ. ಈ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದೆ.
ಅಲಖನೂರ ಗ್ರಾಮದ ಕರಿಯಪ್ಪ ಬೇವನೂರ (30) ಸಾವನ್ನಪ್ಪಿರುವ ಮಾವುತ. ಅಲಖನೂರ ಕರಿಸಿದ್ದೇಶ್ವ ದೇವಸ್ಥಾನದ 21 ವರ್ಷದ ಧ್ರುವ ಹೆಸರಿನ ಆನೆ ತನ್ನ ಮಾವುತನನ್ನೇ ಸಾಯಿಸಿದೆ.
ಭಾನುವಾರ ರಾತ್ರಿ ಆನೆಗೆ ಮದ ಬಂದಿತ್ತು. ಬೆಳಗ್ಗೆ ಕರಿಯಪ್ಪ ಮೇವು ಹಾಕಲು ಹೋದಾಗ ಗಂಡಾನೆ ಸೊಂಡಿಲಿನಿಂದ ಹಾಗೂ ದಂತಗಳಿಂದ ತಿವಿದು ಹತ್ಯೆ ಮಾಡಿದೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.