ಹಾಸನ: ಅನಾರೋಗ್ಯದ ಹಿನ್ನೆಲೆಯಲ್ಲಿ ನಿಂತಲ್ಲೇ ನಿಂತು ಆನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಣಗೂರು ಹತ್ತಿರ ಈ ಘಟನೆ ನಡೆದಿದೆ. ಹೆಣ್ಣಾನೆಯೊಂದು ಕಳೆದ ಮೂರು ದಿನಗಳಿಂದ ನಿಂತಲ್ಲೇ ನಿಂತು ಸಾವನ್ನಪ್ಪಿದೆ ಎನ್ನಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆನೆ ಆಹಾರ ತ್ಯಜಿಸಿ ನಿಂತಲ್ಲೇ ನಿಂತಿತ್ತು ಎನ್ನಲಾಗಿದೆ.
ಇದನ್ನು ಕಂಡು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆಗೆ ಮುಂದಾಗಿದ್ದರು. ಆದರೆ, ಆನೆ ಮಾತ್ರ ಅನಾರೋಗ್ಯಕ್ಕೆ ಬಲಿಯಾಗಿದೆ ಎನ್ನಲಾಗಿದೆ. ಈ ಆನೆ ಸುಮಾರು 20 ವರ್ಷದ ಹೆಣ್ಣಾನೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲೇ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ.