ವಿಶ್ವಸಂಸ್ಥೆಯು ಏಡ್ಸ್ ರೋಗದ ಬಗ್ಗೆ ಆತಂಕದ ವಿಷಯವೊಂದನ್ನು ಬಹಿರಂಗ ಪಡಿಸಿದೆ.
ಹಿಂದಿನ ವರ್ಷ ವಿಶ್ವದಾದ್ಯಂತ ಏಡ್ಸ್ ಗೆ ಕಾರಣವಾಗುವ ಎಚ್ ಐವಿ ವೈರಸ್ ಸುಮಾರು 4 ಕೋಟಿ ಜನರಲ್ಲಿ ಪತ್ತೆಯಾಗಿತ್ತು. ಈ ಪೈಕಿ 90 ಲಕ್ಷ ಜನರಿಗೆ ಚಿಕಿತ್ಸೆ ಸಿಕ್ಕಿಲ್ಲ. ಹೀಗಾಗಿ ಪ್ರತಿ ನಿಮಿಷಕ್ಕೊಬ್ಬ ರೋಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ವಿಶ್ವಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ಈ ವಿಷಯ ಬಹಿರಂಗ ಮಾಡಿದೆ. ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿರುವಾಗ ಈ ವಿಷಯ ಆತಂಕಕ್ಕೆ ಕರಾಣವಾಗುತ್ತಿದೆ. ಹಣದ ಕೊರತೆ, ಈ ಸಾವಿಗೆ ಕಾರಣ ಎಂದು ಕೂಡ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪೂರ್ವ ಯುರೋಪ್, ಮಧ್ಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿದೆ. ಕಳೆದ ವರ್ಷ 6 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಎನ್ನಲಾಗಿದೆ. 2023 ರಲ್ಲಿ ಸುಮಾರು 6,30,000 ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ.
2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವುದಾಗಿ ಜಾಗತಿಕ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು UNAIDS ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬೈನಿಮಾ ಹೇಳಿದ್ದಾ .ಏಡ್ಸ್ ವೈರಸ್ ರಕ್ತ, ವೀರ್ಯ ಮತ್ತು ಯೋನಿ ದ್ರವಗಳಮೂಲಕ ಇದು ಹರಡುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಯೋನಿ, ಮೌಖಿಕ ಅಥವಾ ಗುದನಾಳದ ಅಸುರಕ್ಷಿತ ಸಂಭೋಗವು ಅಪಾಯಕಾರಿ. ಸೋಂಕಿತ ಮಾದಕ ವ್ಯಸನಿಗಳ ಸೂಜಿಗಳು ಮತ್ತು ಶೇವಿಂಗ್ ಬ್ಲೇಡ್ ಗಳ ಬಳಕೆ ಕೂಡ ಇದಕ್ಕೆ ಕಾರಣ. ಹೀಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗುತ್ತಿದೆ.