ಬೆಂಗಳೂರು: ಮಿಸ್ಸಿಂಗ್, ಮರ್ಡರ್, ಅಚ್ಚರಿ ಕಥೆ ಹೊಂದಿರುವ ಅಮರಾವತಿ ಪೊಲೀಸ್ ಸ್ಟೇಷನ್ ಟೀಸರ್ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿದ್ದಾರೆ. ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ಹಿರಿಯ ಪ್ರಚಾರಕರ್ತ ನಾಗೇಂದ್ರ ಅವರು ಅಮರಾವತಿ ಪೊಲೀಸ್ ಸ್ಡೇಷನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.
ಇದ್ದಕ್ಕಿದ್ದ ಹಾಗೆ ಕಾಣೆಯಾಗುವ ಊರಿನ ಗೌಡ, ಆತನನ್ನು ಪತ್ತೆ ಹಚ್ಚಲು ಬಂದ ಪೋಲೀಸ್ ಕೂಡ ಕಾಣೆಯಾಗುತ್ತಾನೆ. ಇದೆಲ್ಲದರ ಹಿಂದೆ ಇರುವ ಮರ್ಮ ಏನೆಂಬುವುದನ್ನು ಹೇಳುವ ಚಿತ್ರವೇ ಅಮರಾವತಿ ಪೊಲೀಸ್ ಸ್ಟೇಷನ್. ಒಂದಷ್ಟು ನಾಗಾಸಾಧುಗಳ ಕಂಟೆಂಟ್ ಕೂಡ ಚಿತ್ರದಲ್ಲಿದೆ ಅದು ಹೇಗೆ? ಏಕೆ? ಅಂತ ಚಿತ್ರ ನೋಡಿಯೇ ತಿಳಿದುಕೊಳ್ಳಬೇಕಿದೆ.
ಯುವನಟ ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ್ವಿಕ ಚಿತ್ರದ ನಾಯಕಿಯ ಪಾತ್ರ ಮಾಡಿದ್ದಾರೆ.
ಪಿ.ಪಿ. ಪವರ್ ಪಿಕ್ಚರ್ಸ್ ಲಾಛನದಲ್ಲಿ ಕೆ.ಆರ್.ಪ್ರದೀಪ್ ಕಮಲಪುರ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕಿಯಾಗಿದ್ದಾರೆ. ಹಿರಿಯ ನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.