ಕೊಪ್ಪಳ : ಲಿಂಗಾಯತರು ಅಂದರೆ ಸರ್ಕಾರಕ್ಕೆ ಅಲರ್ಜಿ. ಎಸ್.ಸಿ, ಎಸ್.ಟಿ ಹಾಸ್ಟೇಲ್ ಬೇರೆ, ಮೈನಾರಿಟಿ ಹಾಸ್ಟೇಲ್ ಬೇರೆ. ಹೀಗಿರುವಾಗ ಒಂದಾಗುವುದೆಂದು ? ಎಂದು ಪ್ರಶ್ನಿಸಿದ್ದಲ್ಲದೇ, ಅಂಬೇಡ್ಕರ್ ಆಶಯ ನನಸಾಗುವುದು ಕೇವಲ ವೀರಶೈವ ಲಿಂಗಾಯತ ಮಠಗಳಿಂದ ಮಾತ್ರ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳದ ಗ್ರಾಮದ ಬಸವೇಶ್ವರ ಜಾತ್ರೆಯಲ್ಲಿ ಭಾಗಿಯಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಜನರು ಬಸವಣ್ಣನನ್ನೆ ಬಿಟ್ಟಿಲ್ಲ, ಇನ್ನು ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಬಿಡುತ್ತಾರಾ ? ಆ ಮಠ ಬಿಟ್ಟು ಬಿಡಿ ಎಂದು ಸ್ವಾಮೀಜಿಗೆ ಹೇಳಿದ್ದೇನೆ. ಎಲ್ಲರೂ ಸೇರಿ ಹತ್ತು ಎಕರೆ ಕೊಡಿಸುತ್ತೇನೆಂದು ಹೇಳಿದ್ದೇನೆ. ಎಲ್ಲಾ ಸಮುದಾಯದ ಮಕ್ಕಳಿಗಾಗಿ ಒಂದು ಹಾಸ್ಟೆಲ್ ನಿರ್ಮಿಸೋಣ ಎಂದು ಅವರಿಗೆ ತಿಳಿಸಿರುವುದಾಗಿ ಯತ್ನಾಳ್ ಮತ್ತೆ ಜಯ ಮೃತ್ಯುಂಜಯ ಸ್ವಾಮೀಜಿ ಪರ ವಹಿಸಿ ಮಾತಾಡಿದ್ದಾರೆ.