ಒಂದು ವಸ್ತು ತನ್ನ ಮಾರುಕಟ್ಟೆ ಮೌಲ್ಯವನ್ನು ನಿಗದಿ ಮಾಡಿಕೊಳ್ಳಬೇಕು ಅಂದ್ರೆ ಅದಕ್ಕೆ ದಶಕಗಳ ಕಾಲಾವಧಿ ಬೇಕು. ಗ್ರಾಹಕರ ಮನಗೆದ್ದು, ಅವನ ಮನೆ ಪ್ರವೇಶಿಸೋ ವಸ್ತುಗಳು, ಮುಂದೆ ಅವರ ಜೀವನದ ಅವಿಭಾಜ್ಯವಾಗಿರುವ ಉದಾಹರಣೆಗಳಿವೆ.
ಹೌದು, ಇವತ್ತು ಕರ್ನಾಕಟದಲ್ಲೂ ರಾಯಭಾರಿ ರಾದ್ಧಾಂತ ಶುರುವಾಗಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಐತಿಹಾಸಕ ಉತ್ಪನ್ನ ಮೈಸೂರ್ ಸ್ಯಾಂಡಲ್ ಸೋಪ್ಸ್ ಗೆ ಈಗ ಬಹುಭಾಷಾ ನಟಿ ತಮನ್ನಾರನ್ನು ಆಯ್ಕೆ ಮಾಡಲಾಗಿದೆ. ಸರ್ಕಾರದ ಈ ನಡೆಯೇ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ರಾಯಭಾರಿತ್ವಕ್ಕೆ ಚಿನ್ನದ ಹೊಳಕು ಕೊಟ್ಟವರು ಅಣ್ಣಾವ್ರು
ಕರ್ನಾಟಕದ ಪ್ರತಿಷ್ಠಿತ ಸರ್ಕಾರಿ ಬ್ರಾಂಡ್ ಗಳಿಗೆ ತನ್ನದೇ ಆದ ಐತಿಹ್ಯವಿದೆ. ಕರುನಾಡಿನಲ್ಲಿ ಮನೆ ಮಾತಾಗಿರುವ ನಂದಿನಿ ಕೂಡಾ ಇವತ್ತು ಗ್ರಾಹಕರ ಅಚ್ಚುಮೆಚ್ಚು. ಹಾಗಂತಾ ಅವತ್ತು ಇದೇ ನಂದಿನಿಗೆ ಓರ್ವ ರಾಯಭಾರಿ ಅಗತ್ಯ ಅನ್ನೋ ನಿರ್ಧಾರಕ್ಕೆ ಬರಲಾಗಿತ್ತು. ಹೀಗಾಗಿಯೇ ಅಂದು ಸರ್ಕಾರ ಕರ್ನಾಟಕದ ಮನೆ ದೇವರು, ಕರ್ನಾಟಕದ ಹೃದಯ ಸಿಂಹಾಸನಾಧೀಶ ಡಾ ರಾಜ್ ಕುಮಾರ್ ರ ಮೊರೆ ಹೋಗಿತ್ತು. ಈ ನಾಡಿನ ಮಣ್ಣಿನ ಮಕ್ಕಳಿಗೆ ಒಲತಾಗೋದಾದ್ರೆ ನನ್ನಿಂದಾದ ನೆರವು ನೀಡ್ತೀನಿ ಅಂದಿದ್ರು. ಈ ಮೂಲಕ ಕನ್ನಡಿಗರ ಸ್ವಂತ ಬ್ರಾಂಡ್ ಗೆ ಕನ್ನಡಿಗರ ಆರಾಧ್ಯ ದೈವವೇ ಅಂಬಾಸಿಡರ್ ಆಗಿದ್ರು. ಇನ್ನೂ ವಿಶೇಷ ಅಂದ್ರೆ ಅವತ್ತು ಡಾ ರಾಜ್ ಕುಮಾರ್ ಈ ರಾಯಭಾರಿತ್ವಕ್ಕೆ ನಯಾ ಪೈಸೆ ಪಡೆದಿರ್ಲಿಲ್ಲ.
ನಂದಿನಿ ಬೆನ್ನಿಗೆ ನಿಂತ ಪುನೀತ್-ಶಿವರಾಜ್ ಕುಮಾರ್
ಇನ್ನು ಅಪ್ಪನ ಹಾದಿಯಲ್ಲೇ ನಂದಿನಿಯನ್ನು ಬೆಂಬಲಿಸಿ ಬೆನ್ನೆಲುಬಾಗಿ ನಿಂತವರು ಪುನೀತ್ ರಾಜ್ ಕುಮಾರ್. ಅಣ್ಣಾವ್ರ ಮಾದರಿಯಲ್ಲೇ ಪುನೀತ್ ಕೂಡಾ ನಂದಿನಿಯನ್ನು ಪೋಷಿಸಿದವರೇ ಹಾಗಂತಾ ಪುನೀತ್ ಇದ್ದಷ್ಟೂ ಕಾಲ ಪ್ರಚಾರಕ್ಕೆ ಅಂತಾ ಒಂದೇ ಒಂದು ನಯಾಪೈಸೆ ಪಡೆದಿರ್ಲಿಲ್ಲ. ಪುನೀತ್ ರ ಅಕಾಲಿಕ ಮರಣದ ಬಳಿಕ ಈ ಹೊಣೆಯನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮುಂದುವರಿಸಿಕೊಂಡು ಹೋಗ್ತಿದ್ದಾರೆ.
ಲಿಡ್ಕರ್ ಗೆ ನಟ ಡಾಲಿ ಧನಂಜಯ್ ರಾಯಭಾರಿ
ಇನ್ನು ಕರ್ನಾಟಕದ ಮತ್ತೊಂದು ದೊಡ್ಡ ಬ್ರಾಂಡ್ ಲಿಡ್ಕರ್, ಕರುನಾಡಿನ ಹೆಮ್ಮೆಯ ಬ್ರಾಂಡ್ ಆಗಿರುವ ಲಿಡ್ಕರ್ ನಲ್ಲಿ 50 ಸಾವಿರ ಕುಟುಂಬಗಳಿವೆ. ಇಂಥಾ ಬ್ರಾಂಡ್ ನ ಪ್ರಚಾರದ ಹೊಣೆಯನ್ನು ರಾಜ್ಯ ಸರ್ಕಾರದ ಕನ್ನಡಿಗರೇ ಆದ ನಟ ಧನಂಜಯ್ ಹೆಗಲಿಗೇರಿಸಿದೆ. ಇದೇ ಮೊದಲ ಬಾರಿ ಲಿಡ್ಕರ್ ತನ್ನ ಬ್ರಾಂಡ್ ನ ವಸ್ತುಗಳ ಪ್ರಚಾರಕ್ಕೆ ಒಬ್ಬರನ್ನು ನೇಮಿಸಿದ್ದು. ಈ ಮೂಲಕ ಲಿಡ್ಕರ್ ಕನ್ನಡ ಡಿಂಡಿಮ ಬಾರಿಸಿತ್ತು.
ಮೈಸೂರು ಸ್ಯಾಂಡಲ್ಸ್ ಗೆ ಸಿಗ್ಲಿಲ್ವಾ ಕನ್ನಡಿಗರು
ಹೀಗೆ ಕರ್ನಾಟಕದ ಹೆಮ್ಮೆಯ ಬ್ರಾಂಡ್ ಗಳಿಗೆ ಕನ್ನಡದ ಮೇರು ತಾರೆಯರೇ ಪ್ರಚಾರ ರಾಯಭಾರಿಗಳಾಗಿ ತಮ್ಮ ಹೊಣೆಗಾರಿಕೆ ಮೆರೆದಿದ್ದಾರೆ. ಆದ್ರೆ ಇದೀಗ ಗಂಧದ ಗುಡಿಯ ಚೆಂದದ ಬ್ರಾಂಡ್ ಅಂತಲೇ ಕರೆಸಿಕೊಳ್ಳೋ ಮೈಸೂರ್ ಸ್ಯಾಂಡಲ್ ಸೋಪ್ಸ್ ಗೆ ಬಹುಭಾಷಾ ತಾರೆ ತಮನ್ನಾರನ್ನು ನಿಯೋಜಿಸಲಾಗಿದೆ. ಈ ವಿಷಯವೀಗ ಕನ್ನಡಗರ ಕಣ್ಣು ಕೆಂಪಗಾಸಿದೆ. ಮೈಸೂರು ಮಹಾರಾಜರ ಕನಸಿನ ಕೂಸಾದ ಸ್ಯಾಂಡಲ್ ಸೋಪ್ಸ್ ಗೆ ಅದರದೇ ಆದ ಐತಿಹ್ಯವಿದೆ. ಇಂಥಾ ಶತಮಾನಗಳ ಹಿಂದಿನ ಬ್ರಾಂಡ್ ಗೆ ಕನ್ನಡಿಗರನ್ನೇ ನೇಮಿಸಬೇಕು ಅನ್ನೋ ಕೂಗು ಈಗ ಮೊಳಗಿದೆ. ಹಾಗಂತಾ ತಮನ್ನಾಗೆ ರಾಜ್ಯ ಸರ್ಕಾರ 2 ವರ್ಷಕ್ಕೆ 6 ಕೋಟಿ ಸಂಭಾವನೆ ನೀಡಿದೆ. ಇದು ಕೂಡಾ ಕನ್ನಡಪರ ಹೋರಾಟಗಾರರನ್ನು ಕೆರಳಿಸಿದೆ.
ಜಾಗತಿಕ ಬ್ರಾಂಡ್ ಮಾಡಲು ತಮನ್ನಾ ಅನಿವಾರ್ಯ
ತಮನ್ನಾ ಗೆ ದುಬಾರಿ ಸಂಭಾವನೆ ನೀಡಿ ರಾಯಭಾರಿಯನ್ನಾಗಿಸಿದ್ದಕ್ಕೆ ವಿರೋಧ ವ್ಯಕ್ತವಾಗ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರೋ ಸಚಿವ ಎಂಬಿ ಪಾಟೀಲ್, ಬ್ರಾಂಡನ್ನ ಜಾಗತಿಕವಾಗಿಸಬೇಕಿದೆ. ವಾರ್ಷಿಕ 5 ಸಾವಿರ ಕೋಟಿಯ ವಹಿವಾಟಿನ ಗುರಿ ಹೊಂದಲಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ ತಾರೆ ಇದ್ರೆ, ಉತ್ತಮ ಮಾರುಕಟ್ಟೆ ಸೃಷ್ಟಿಯಾಗುತ್ತೆ ಅಂತಿದ್ದಾರೆ ಸಚಿವರು. ಇದರ ನಡುವೆ ಕನ್ನಡಪರ ಸಂಘಟನೆಗಳು ತಮ್ಮನಾ ಬದಲಿಸದಿದ್ರೆ ಹೋರಕಾಟದ ಎಚ್ಚರಿಕೆ ನೀಡಿದೆ. ಅದೇನೇ ಇರಲಿ ನಾವಿವತ್ತು ಸ್ವರ್ಧಾತ್ಮಕ ಯುಗದಲ್ಲಿದ್ದೇವೆ ನಿಜ. ಒಂದು ಬ್ರಾಂಡ್ ಜಗತ್ತಿನೆಲ್ಲೆಡೆ ಸದ್ಜು ಮಾಡಬೇಕಿದ್ರೆ ಅದಕ್ಕೆ ಅಬ್ಬರದ ಪ್ರಚಾರವೂ ಅನಿವಾರ್ಯ. ತಮನ್ನಾ ಆಗಿರ್ಲಿ, ಧನಂಜಯ್ ಆಗಿರ್ಲಿ. ಡಾ ರಾಜ್ ಕುಮಾರ್ ಅವರು ರೂಪಿಸಿದ್ದ ಮಾದರಿಯನ್ನು ಪಾಲಿಸುವ ಕನ್ನಡಗರಿಗೇ ಆದ್ಯತೆ ಸಿಕ್ಕಿದ್ರೆ ಅದಕ್ಕೊಂದು ತೂಕವಿರ್ತಿತ್ತು. ತಮನ್ನಾ ಬದಲಿಗೆ ಕನ್ನಡ ಸೊಗಡಿನ ತಾರೆಯೇ ಕನ್ನಡಿಗರ ಹೆಮ್ಮೆಯ ಬ್ರಾಂಡ್ ನ್ನು ಪ್ರತಿನಿಧಿಸಿದ್ರೆ ಮತ್ತಷ್ಚು ಆದರ್ಶನೀಯವಾಗಿರ್ತಿತ್ತು.


















