ವಿಜಯಪುರ: ಕೃಷ್ಣಾ ಕಣಿವೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನದಿ ಪಾತ್ರಕ್ಕೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದ್ದು, 1 ಲಕ್ಷ 25 ಸಾವಿರ ಕ್ಯುಸೇಕ್ ನೀರು ಬಿಡುಗಡೆಯಾಗಿದೆ.
ನದಿ ಪಾತ್ರಕ್ಕೆ ತೆರಳದಂತೆ, ಜಾನುವಾರುಗಳನ್ನು ಬಿಡದಂತೆ, ಎಚ್ಚರಿಕೆಯಿಂದಿರುವಂತೆ ಸ್ಥಳೀಯರಿಗೆ ಆಲಮಟ್ಟಿ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.