ಮುಂಬಯಿ: ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗ ಹೊಸ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ.
‘ಪುಷ್ಪ 2’ (Pushpa 2) ಕಾಲ್ತುಳಿತದ ನಂತರ ನಟ ಅಲ್ಲು ಅರ್ಜುನ್ ಸಾಕಷ್ಟು ವಿವಾದಕ್ಕೆ ಕಾರಣರಾದರು. ಹೀಗಾಗಿಯೇ ಅವರು ರಾಜಕೀಯ ಪಕ್ಷದಲ್ಲಿ ಇರುವಂತೆ ವಕ್ತಾರರ ಹುದ್ದೆ ಸೃಷ್ಟಿಸಿಕೊಂಡಿದ್ದಾರೆ. ‘ಪುಷ್ಪ 2’ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣದ ವಿಚಾರದಲ್ಲಿ ಬೇಲ್‌ನಲ್ಲಿರುವ ಅಲ್ಲು ಅರ್ಜುನ್ (Allu Arjun) ಈ ನಿರ್ಧಾರ ಕೈಗೊಂಡಿದ್ದಾರೆ.
ವಿವಾದಗಳಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳ ಜೊತೆ ಹಾಗೂ ಅಭಿಮಾನಿಗಳಿಗೆ ತಮ್ಮ ಸಿನಿಮಾಗಳ ಕುರಿತು ಅಪ್ಡೇಟ್ ನೀಡಲು ವಕ್ತಾರರನ್ನು ನೇಮಿಸಿಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಅಲ್ಲು ಅರ್ಜುನ್ ಅವರ ಬಗ್ಗೆ ವಕ್ತಾರರು ಅಪ್ಡೇಟ್ ನೀಡಲಿದ್ದಾರೆ.
‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್‌ಗೆ ಯಶಸ್ಸು ನೀಡಿದೆ. ಸಿನಿಮಾದ ಪ್ರೀಮಿಯರ್ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಮಹಿಳೆಯ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಅಲ್ಲು ಅರ್ಜುನ್ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅನಾವಶ್ಯಕ ಸುದ್ದಿಗಳು ಮತ್ತು ತಪ್ಪು ಮಾಹಿತಿಗಳು ಹೆಚ್ಚಾಗಿ ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ಅಲ್ಲು ಅರ್ಜುನ್ ವಕ್ತಾರರನ್ನು ನೇಮಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಮಾರ್ಚ್‌ನಿಂದ ಇದು ಜಾರಿಗೆ ಬರಲಿದೆ ಎಂದು ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ, ಅಲ್ಲು ಅರ್ಜುನ್ ಆಪ್ತ ನಿರ್ಮಾಪಕ ಬನ್ನಿ ವಾಸ್ ರಿವೀಲ್ ಮಾಡಿದ್ದಾರೆ.