ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಮಾಡಿದ ಆರೋಪದಡಿ ಹುಕ್ಕೇರಿ ತಾಲೂಕು ಸಬ್ ರಿಜಿಸ್ಟ್ರಾರ್ ಮಡಿವಾಳಯ್ಯ ಬಾನಿಮಠ ಹಾಗೂ ಬಾಂಡ್ ರೈಟರ್ ಆನಂದ ದಡ್ಡಿಮನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನಿರೀಕ್ಷಣಾ ಜಾಮೀನು ಮಂಜೂರಾದ ಖುಷಿಯಲ್ಲಿ ಜಾಮೀನು ಪಡೆಯಲು ಬಂದಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ಜಾಮೀನು ಪ್ರತಿ ತೋರಿಸಿ ನಿರಾಳರಾಗುವಷ್ಟರಲ್ಲಿ ಹುಕ್ಕೇರಿ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯಮಕನಮರಡಿ ಪೊಲೀಸರು 3 ಜನರನ್ನು ಬಂಧಿಸಿರುವುದು ತಿಳಿದುಬಂದಿದೆ. ಹೊಸ ಪ್ರಕರಣವನ್ನು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ
ಇದನ್ನೂ ಓದಿ : 2026ರಲ್ಲಿ ಭಾರತದ ರಸ್ತೆಗಿಳಿಯಲಿವೆ 10 ಹೊಸ ಕಾರುಗಳು | ಫಾರ್ಚುನರ್, ಸ್ಕಾರ್ಪಿಯೋದಿಂದ ಟಾಟಾ ಅವಿನ್ಯಾವರೆಗೆ ಸಂಪೂರ್ಣ ವಿವರ!



















