ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 21ರಿಂದ SSLC ಪರೀಕ್ಷೆ ಆರಂಭವಾಗುತ್ತಿವೆ. ಈಗಾಗಲೇ ಎಲ್ಲ ರೀತಿಯ ಸಕಲ ತಯಾರಿಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.
ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ಈ ಪರೀಕ್ಷೆಗಳು ನಡೆಯುತ್ತಿವೆ. ಹೀಗಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.
ಈ ಬಾರಿ ರಾಜ್ಯದಲ್ಲಿ ಪರೀಕ್ಷೆಗೆ ಒಟ್ಟು ವಿದ್ಯಾರ್ಥಿಗಳು- 8,96,447 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಹೊಸಬರು- 8,42,817, ಪುನರಾವರ್ತಿತ – 38,091, ಖಾಸಗಿ ವಿದ್ಯಾರ್ಥಿಗಳು- 15,539 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಬಾರಿ 15,881 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿವೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ-2818, ಸ್ಥಾನಿಕ ಜಾಗೃತ ದಳ ಸಂಖ್ಯೆ-2818, ವಿಚಕ್ಷಣ ಜಾಗೃತ ದಳ, ಜಿಲ್ಲಾ ಹಂತ – 410, ತಾಲ್ಲೂಕು ಹಂತ – 1662 ಕೇಂದ್ರಗಳು ಪರೀಕ್ಷೆಗಾಗಿ ಸಿದ್ಧಗೊಂಡಿವೆ. ವಿದ್ಯಾರ್ಥಿಗಳು ಎದೆಗುಂದದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯವಾಗಿದೆ.