ಸ್ಯಾಂಡಲ್ ವುಡ್ ನ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಬಳಿಕ ಅವರ ಮಕ್ಕಳಿಬ್ಬರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಹಿರಿಯ ಮಗ ದರ್ಶನ್ ಖ್ಯಾತ ನಟನಾಗಿದ್ದರೆ, ಕಿರಿಯ ಮಗ ದಿನಕರ್ ಖ್ಯಾತ ನಿರ್ದೇಶಕನಾಗಿ ಗುರುತಿಸಿಕೊಂಡರು. ಇದೀಗ ತೂಗುದೀಪ ಶ್ರೀನಿವಾಸ್ ಮೊಮ್ಮಗ ಅಂದರೆ ಮಗಳ ಮಗ ಚಂದು ಅಲಿಯಾಸ್ ಚಂದ್ರಕುಮಾರ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ದರ್ಶನ್, ಸೋದರಳಿಯನನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನೋಟದಲ್ಲಿ ದರ್ಶನ್‌ರನ್ನೇ ಹೋಲುವ ದಚ್ಚು ಅಕ್ಕನ ಮಗ ಚಂದು, ಹೀರೋ ಆಗಿ ಎಂಟ್ರಿ ಕೊಡಲು ಏನ್ ಬೇಕೋ ಅದೆಲ್ಲ ಸಿದ್ಧತೆಯನ್ನು ಹಲವು ವರ್ಷಗಳಿಂದ ಮಾಡ್ಕೊಂಡೇ ಬಂದಿದ್ದಾರೆ ಎನ್ನಲಾಗ್ತಾಯಿದೆ. ಇದೀಗ ದರ್ಶನ್ ತಮ್ಮ ಸಹೋದರಿಯ ಪುತ್ರನ ಕನಸು ನನಸು ಮಾಡುತ್ತಿದ್ದಾರೆ. ತಮ್ಮದೇ ಬ್ಯಾನರ್ ಮೂಲಕವೇ ಚಂದುವನ್ನ ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.



















