ಕಾರವಾರ: ಮೈಸೂರು ದಸರಾ ರಾಜ್ಯದ ನಾಡ ಹಬ್ಬವಾಗಿದೆ. ಇದರಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರು ಎಂದು ತಾರತಮ್ಯ ಮಾಡಬಾರದು ಎಂದು ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ಸೂಪಾ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಬಳಿಕ ಗಣೇಶಗುಡಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ಎಲ್ಲಾ ಜನಾಂಗದವರಿಗೂ ದಸರಾ ಉದ್ಘಾಟನೆ ಮಾಡುವ ಹಕ್ಕಿದೆ. ಬಾನು ಮುಷ್ತಾಕ್ ಒಬ್ಬರು ಒಳ್ಳೆಯ ಲೇಖಕರು.
ಒಳ್ಳೆಯ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಮೆಚ್ಚಿ ಸರ್ಕಾರ ನೇಮಕ ಮಾಡಿದ್ದು, ಇಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.