ಲಂಡನ್: ಒಂದಲ್ಲ, ಎರಡಲ್ಲ ಬರೋಬ್ಬರಿ 10 ವರ್ಷ ವಿಂಬಲ್ಡನ್ ರಾಜನಾಗಿ ಮೆರೆದಿದ್ದ ನೊವಾಕ್ ಜೊಕೊವಿಕ್‌ಗೆ (Novak Djokovic) ಸತತ 2ನೇ ಬಾರಿಗೆ ಕಾರ್ಲೋಸ್ ಅಲ್ಕರಾಜ್ (Carlos Alcaraz) ಶಾಕ್ ನೀಡಿದ್ದಾರೆ.
ಭಾನುವಾರ ಲಂಡನ್‌ನ ವಿಂಬಲ್ಡನ್ ಸೆಂಟರ್ ಕೋರ್ಟ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ ಸತತ 2ನೇ ಬಾರಿಗೆ ವಿಂಬಲ್ಟನ್ ಕಿರೀಟ (Wimbledon Crown)ಕ್ಕೆ ಮುತ್ತಿಕ್ಕಿದ್ದಾರೆ.
ಹಿಂದಿನ ವರ್ಷ ಕೂಡ ಅಲ್ಕರಾಜ್, ನೊವಾಕ್ ಜೊಕೊವಿಕ್ ಅವರನ್ನೇ ಮಣಿಸಿ ಚೊಚ್ಚಲ ವಿಂಬಲ್ಡನ್ ಕಿರೀಟ ಎತ್ತಿ ಹಿಡಿದಿದ್ದರು. ಈ ಬಾರಿ ಮತ್ತೊಮ್ಮೆ ಅದೇ ಪರಿಸ್ಥಿತಿ ಎದುರಾಗಿದೆ. 6-2, 6-2, 7-6 (7/4) ನೇರ ಸೆಟ್ ಗಳಿಂದ ಮಣಿಸುವ ಮೂಲಕ ಅಲ್ಕರಾಜ್ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ.
ಮೊದಲ ಎರಡು ಸುತ್ತಿನಲ್ಲಿ ಹಿಡಿತ ಸಾಧಿಸಿದ್ದ ಅಲ್ಕರಾಜ್ 6-2, 6-2 ಸೆಟ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರು. ಕೊನೆಯ ಸುತ್ತಿನಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿದರೂ 7-6 ಸೆಟ್‌ನಲ್ಲಿ ಜೊಕೊವಿಕ್ ರನ್ನು ಸೋಲಿಸುವ ಮೂಲಕ ಯಶ ಕಂಡಿದ್ದಾರೆ. ಈ ಗೆಲುವಿನ ಮೂಲಕ ಅಲ್ಕರಾಜ್ 3ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿ (Grand Slam Crown) ಗೆದ್ದಂತಾಗಿದೆ.