ಬೆಂಗಳೂರು: ವಂಚಕಿ ಐಶ್ವರ್ಯಗೌಡ ಸಿಡಿಆರ್ ಪ್ರಕರಣಕ್ಕೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.2022 ರಿಂದ 2024 ರ ಅವಧಿಯಲ್ಲಿ ಕೆಲವರ ಸಿಡಿಆರ್ ನ್ನು ವಂಚಕಿ ಐಶ್ವರ್ಯಗೌಡ ತೆಗೆಸಿದ್ದರು ಎನ್ನಲಾಗಿದೆ. ಸದ್ಯ ಐಶ್ವರ್ಯಗೌಡ ವಿರುದ್ದ ದಾಖಲಾಗಿದ್ದ ಸಿಡಿಆರ್ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೋರ್ಟ್ ತಡೆಯಾಜ್ಞೆಗೂ ಮುನ್ನ ಸರ್ವೀಸ್ ಪ್ರೊವೈಡರ್ ಗಳಿಂದ ತನಿಖಾಧಿಕಾರಿ ಮಾಹಿತಿ ಪಡೆದಿದ್ದರು. 2022 ರಿಂದ 2024 ರವರೆಗೂ ಯಾವೆಲ್ಲ ಆಫೀಸರ್ಸ್ ಸಿಡಿಆರ್ ಪಡೆದಿದ್ದಾರೆ. ಯಾವ ಕೇಸ್ ನಂಬರ್ ಉಲ್ಲೇಖಿಸಿ ಯಾವೆಲ್ಲ ನಂಬರ್ ಕಾಲ್ ಡಿಟೇಲ್ಸ್ ರೆಕಾರ್ಡ್ ಪಡೆದಿದ್ದಾರೆ ಎಂಬ ಮಾಹಿತಿಯನ್ನು ತನಿಖಾಧಿಕಾರಿ ಪಡೆದಿದ್ದಾರೆ.
ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇ ಇದ್ದು, ಮುಂದೆ ಇದು ಯಾರಿಗೆಲ್ಲ ಸಂಕಷ್ಟ ತರುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ. ಆದರೆ, ಸದ್ಯ ಸದ್ಯ ಸಿಡಿಆರ್ ಪ್ರಕರಣಕ್ಕೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಫೆಬ್ರವರಿ 18ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿಕೆ..