ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್(D.K. Suresh) ತಂಗಿ ಎಂದು ಹೇಳಿಕೊಂಡು ಹಲವರಿಗೆ ಐಶ್ವರ್ಯಾ ಗೌಡ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಸದ್ಯ ವರ್ಗಾವಣೆ ಆದೇಶ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಪ್ರಕರಣದ ತನಿಖಾಧಿಕಾರಿಯನ್ನು ಸರ್ಕಾರ ಇತ್ತೀಚೆಗೆ ವರ್ಗಾವಣೆ ಮಾಡಿತ್ತು. ತನಿಖಾಧಿಕಾರಿಯಾಗಿದ್ದ ಎಸಿಪಿ ಭರತ್ ರೆಡ್ಡಿ(ACP Bharat Reddy) ಅವರ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಮತ್ತೆ ಸರ್ಕಾರ ವರ್ಗಾವಣೆ ಆದೇಶ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ತನಿಖಾಧಿಕಾರಿ ಭರತ್ ರೆಡ್ಡಿ ಕಳೆದ ಶುಕ್ರವಾರ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಬಳಿಯಿದ್ದ ಕಾರನ್ನು ಸೀಜ್ ಮಾಡಿದ್ದರು. ಐಶ್ವರ್ಯಗೌಡ(Aishwarya Gowda) ಪತಿ ಹೆಸರಿನಲ್ಲಿದ್ದ ಬೆಂಜ್ ಕಾರನ್ನು ಸೀಜ್ ಮಾಡಿದ್ದರು. ಈ ಕಾರನ್ನೇ ಭರತ್ ರೆಡ್ಡಿ ಸೀಜ್ ಮಾಡಿದ್ದರು. ಹೀಗಾಗಿಯೇ ಭರತ್ ರೆಡ್ಡಿಯನ್ನು ವರ್ಗಾವಣೆ ಮಾಡಿರುವುದಾಗಿ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಭರತ್ ರೆಡ್ಡಿ ವರ್ಗಾವಣೆಯನ್ನು ರದ್ದುಗೊಳಿಸಿ, ಅದೇ ಸ್ಥಳದಲ್ಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದೆ.