ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಮುಂದುವರಿದಿದ್ದು, ಕೆಲವು ಕಡೆ ಆತಂಕಕಾರಿ ಮಟ್ಟ ತಲುಪಿದೆ. ಬೆಂಗಳೂರು ಸೇರಿದಂತೆ ಹೆಚ್ಚಿನ ನಗರಗಳಲ್ಲಿ AQI 150ಕ್ಕಿಂತ ಕಡಿಮೆಯಿದ್ದರೂ, ಆರೋಗ್ಯದ ದೃಷ್ಟಿಯಿಂದ ಇದು ಇನ್ನೂ ಸುರಕ್ಷಿತ ಮಟ್ಟದಲ್ಲಿಲ್ಲ. ಇಂದು ಬೆಂಗಳೂರಿನ ಏರ್ ಕ್ವಾಲಿಟಿ ಸೂಚ್ಯಂಕ (AQI) 146ಕ್ಕೆ ದಾಖಲಾಗಿದೆ.
ಇದಕ್ಕೆ ವಿರುದ್ಧವಾಗಿ ಉಡುಪಿಯಲ್ಲಿ ಗಾಳಿಯ ಗುಣಮಟ್ಟ ಏಕಾಏಕಿ ಹದಗೆಟ್ಟಿದ್ದು, AQI 221ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ 100ರಿಂದ 150ರ ನಡುವೆ ಇರುವ ಉಡುಪಿಯ AQI ಇಷ್ಟು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಮಂಗಳೂರು ಸೇರಿದಂತೆ ಕೆಲವು ಕರಾವಳಿ ಜಿಲ್ಲೆಗಳಲ್ಲೂ ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲೇ ಮುಂದುವರಿದಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ, 100ಕ್ಕಿಂತ ಮೇಲ್ಪಟ್ಟ AQI ಮಟ್ಟವೇ ಆರೋಗ್ಯಕ್ಕೆ ಹಾನಿಕರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಪ್ರಸ್ತುತ ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಜ್ಞರು ಮಕ್ಕಳಿಗೆ, ವೃದ್ಧರಿಗೆ ಹಾಗೂ ಶ್ವಾಸಕೋಶ ಸಮಸ್ಯೆಯುಳ್ಳವರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –146
- ಮಂಗಳೂರು-157
- ಮೈಸೂರು –96
- ಬೆಳಗಾವಿ – 136
- ಕಲಬುರ್ಗಿ-97
- ಶಿವಮೊಗ್ಗ – 138
- ಬಳ್ಳಾರಿ – 165
- ಹುಬ್ಬಳ್ಳಿ- 154
- ಉಡುಪಿ –221
- ವಿಜಯಪುರ –131
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+



















