ನವದೆಹಲಿ: ಏರ್ ಇಂಡಿಯಾ ಹಿಂದೂ ಮತ್ತು ಸಿಖ್ ಪ್ರಯಾಣಿಕರಿಗೆ ಹಲಾಲ್ ಊಟ ನೀಡುವುದನ್ನು ನಿಲ್ಲಿಸಿದೆ.
ಸಾಂಸ್ಕೃತಿಕ ಸೂಕ್ಷ್ಮತೆಗಳು ಮತ್ತು ಆಹಾರದ ಆದ್ಯತೆಗಳನ್ನು ಗೌರವಿಸುವುದಕ್ಕಾಗಿ ಈ ರೀತಿ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. “ಹಲಾಲ್ ಮಾಫಿಯಾ” ಎಂದು ಉಲ್ಲೇಖಿಸಲಾದ ಒಂದು ದಶಕದ ಹೋರಾಟದ ನಂತರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಏರ್ ಇಂಡಿಯಾದ ಈ ನಿರ್ಧಾರವನ್ನು ಹಿಂದೂ ಮತ್ತು ಸಿಖ್ ಸಮುದಾಯದ ಹಲವರು ಸ್ವಾಗತಿಸಿದ್ದಾರೆ.