ಬೆಂಗಳೂರು: ನಾಲ್ಕನೇ ದಿನಕ್ಕೆ ಏರ್ ಇಂಡಿಯಾ ಶೋ ಕಾಲಿಟ್ಟಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಏರ್ ಶೋ ಹಿನ್ನಲೆಯಲ್ಲಿ ನಗರದಲ್ಲಿ ಬೆಳ್ಳಂಬೆಳಕ್ಕೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೋಗಿಲು ಕ್ರಾಸ್ ಬಳಿ ಹೆಚ್ಚಿನ ಟ್ರಾಫಿಕ್ ಉಂಟಾಗಿತ್ತು. ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಏರ್ ಶೋ ವೀಕ್ಷಿಸಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ಇಂದು ಲಕ್ಷಾಂತರ ಜನರು ಏರ್ ಶೋ ವೀಕ್ಷಿಸಲು ಹೋಗುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಟು ನಡೆಸಿದರು. ಹಲವರಂತೂ ಫುಟ್ ಪಾತ್ ಮೇಲೆಯೇ ಸಂಚಾರ ನಡೆಸಿದ್ದಾರೆ. ಫುಟ್ ಪಾತ್ ಮೇಲೆಯೇ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸಿದ್ದಾರೆ.