ಬೆಂಗಳೂರು: ನಗರದಲ್ಲಿ (Bengaluru) ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರು ಇಡೀ ವಿಶ್ವದಲ್ಲಿ ಟ್ರಾಫಿಕ್ ವಿಷಯದಲ್ಲಿ ಕುಖ್ಯಾತಿ ಗಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು (Traffic Jam) ನಿಯಂತ್ರಿಸಲು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಕೃತಕ ಬುದ್ದಿಮತ್ತೆ AI ಆಧರಿತ ಸ್ವಯಂ ಚಾಲಿತ ಸಿಗ್ನಲ್ ಗಳನ್ನು (AI Based Signal) ಅಳವಡಿಸುತ್ತಿದ್ದಾರೆ.
ಈಗಾಗಲೇ ನಗರದ 125 ಜಂಕ್ಷನ್ ಗಳಲ್ಲಿ ಎಐ ಆಧರಿತ ಸಿಗ್ನಲ್ ಅಳವಡಿಸಲಾಗಿದೆ. ಈ ಎಐ ಆಧಾರಿತ ಸಿಗ್ನಲ್ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತವೆ. 53 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಒಟ್ಟು 165 ಜಂಕ್ಷನ್ನಲ್ಲಿ ಎಐ ಆಧರಿತ ಕ್ಯಾಮೆರಾ ಅಳವಡಿಸಲು ಯೋಚಿಸಲಾಗಿದೆ.
ಎಐ ಸಿಗ್ನಲ್ನಲ್ಲಿ ಎಷ್ಟು ವಿಧ? ಕಾರ್ಯ ಹೇಗೆ?
ಎಐ ಸಿಗ್ನಲ್ನಲ್ಲಿ ಎರಡು ರೀತಿಯಲ್ಲಿ ಕೆಲಸ ಮಾಡುತ್ತವೆ. ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ (BATCAS) ಮತ್ತು ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (VAC). ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಬೆಂಗಳೂರಿನ ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಗ್ರೀನ್ ಸಿಗ್ನಲ್ ನ್ನು ನೀಡುತ್ತದೆ. ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ ಹೆಚ್ಚು ವಾಹನ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್ ಸಿಗ್ನಲ್ ನ್ನೂ ಹಾಗೂ ಕಡಿಮೆ ವಾಹನ ಇರುವಲ್ಲಿ ಕಡಿಮೆ ಸಮಯ ಗ್ರೀನ್ ಸಿಗ್ನಲ್ ನೀಡುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ಸಂಚಾರ ದಟ್ಟಣೆ ತಗ್ಗಿಸಬಹುದು ಎನ್ನಲಾಗುತ್ತಿದೆ.