ಮಂಡ್ಯ: ಕೃಷಿ ಕ್ಷೇತ್ರದಲ್ಲಿ ನಡೆದ ರೈತ ಶೋಷಣೆಯ ಘಟನೆ ರಾಜ್ಯದ ಗಮನ ಸೆಳೆದಿದೆ. ಮಂಡ್ಯದ ನಾಗಮಂಗಲ ಪಟ್ಟಣದ APMC ರಾಗಿ ಖರೀದಿ ಕೇಂದ್ರದಲ್ಲಿ, ಗ್ರೇಡರ್ ಯೋಗೇಶ್ ಎಂಬ ಸಿಬ್ಬಂದಿ ರೈತರಿಗೆ ಲಂಚ ಪಡೆಯುತ್ತಿದ್ದಂತೆ ಆರೋಪಿಸಲಾಗಿದೆ.
ರೈತರೊಡನೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯಲ್ಲಿರುವ ಗ್ರೇಡರ್ ಯೋಗೇಶ್ ಅಧಿಕೃತ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ರೈತರನ್ನು ಬೆದರಿಸುತ್ತಿದ್ದನೆಂದು ತೋರುತ್ತಿದೆ. ಈ ವಿಡಿಯೋದಲ್ಲಿ, “ನಾನು ಮಂಡ್ಯದವರೇ ಸಚಿವ ಚೆಲುವರಾಯಸ್ವಾಮಿ ಹಾಗೂ ಅವರ ಶಿಷ್ಯ ಸೋಮಣ್ಣರೊಂದಿಗೆ ಟೇಬಲ್ ಮೆಟ್, ನಿಮ್ಮ ಮೇಲೆ ಕೃಪಾ ಕಟಾಕ್ಷ ಇದೆ” ಎಂದು ಗ್ರೇಡರ್ ಯೋಗೇಶ್ ಬೆದರಿಕೆ ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ರೈತರು ಲಂಚ ನೀಡದೆ ರಾಗಿ ಖರೀದಿ ಮಾಡಲು ಆಗದ ಹಿನ್ನೆಲೆಯಲ್ಲಿ, ಅವರು ತೀವ್ರ ತಿರಸ್ಕಾರ ವ್ಯಕ್ತಪಡಿಸಿದ್ದಾರೆ. ಈ ಅಕ್ರಮ ವರ್ತನೆ ಬಗ್ಗೆ ರೈತರು APMC ಅಧಿಕಾರಿಗಳಿಂದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ ಮತ್ತು ಜಿಲ್ಲೆ ಹಾಗೂ ರಾಜ್ಯದ ಕೃಷಿ ಇಲಾಖೆಗೆ ಶೋಷಣೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಾರ್ ಎಫೆಕ್ಟ್.. ಗ್ಯಾಸ್ ಸಿಲಿಂಡರ್ ನೋ ಸ್ಟಾಕ್ ಬೋರ್ಡ್



















