ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಹಲೋಕ ತ್ಯಜಿಸಿದ್ದು, ರಾಜಕೀಯ ರಂಗ ಅನಾಥವಾದಂತಾಗಿದೆ. ಈ ಮಧ್ಯೆ ಅವರ ಬಗೆಗಿನ ಕೆಲವು ವಿಶೇಷ ಸುದ್ದಿಗಳು ಹೊರ ಬೀಳುತ್ತಿವೆ.
ಕೃಷ್ಣ ಅವರು ತಿರುಪತಿ ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿದ ಮೇಲೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು ಎನ್ನಲಾಗಿದೆ. ಅವರು ತಿಮ್ಮಪ್ಪನ ಪಾದಕ್ಕೆ ವಾಚ್ ಹಾಕುತ್ತಿದ್ದಂತೆ ಕೇಂದ್ರ ಸಚಿವರಾಗುವ ಸುದ್ದಿ ಹೊರ ಬಿದ್ದಿತ್ತು.
1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಂಗಳಾರತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ವಾಚು ಕೈಯಿಂದ ಕಳಚಿ ಬಿದ್ದಿತ್ತು. ದೇವಾಲಯದ ಅರ್ಚಕರು ಗಮನಿಸಿ, ಕಳಚಿದ ವಾಚ್ ನ್ನು ಹುಂಡಿಗೆ ಹಾಕುವಂತೆ ಹೇಳಿದ್ದರು.
ಆನಂತರ ಮತ್ತೆ ಅವರ ಪತ್ನಿ ಪ್ರೇಮಾ ಅವರ ಜೊತೆ ತಿರುಪತಿ ಹೋಗಿದ್ದರು. ಆಗ ತಮ್ಮ ವಾಚ್‌ನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಬಂದಿದ್ದರು. ತಿರುಪತಿಯಿಂದ ಬಂದ ಮಾರನೇ ದಿನವೇ ಅವರಿಗೆ ಕೇಂದ್ರ ಸಚಿವರಾಗುವ ಸುದ್ದಿ ಸಿಕ್ಕಿತು. ಕೂಡಲೇ ದೆಹಲಿಗೆ ತೆರಳಿ ಪ್ರಧಾನಿ ಇಂದಿರಾ ಗಾಂಧಿ ಭೇಟಿಯಾಗಿ, ಅವರ ಸಂಪುಟದಲ್ಲಿ ಸಚಿವರಾಗಿದ್ದರು.