ನವದೆಹಲಿ: ದೇಶಾದ್ಯಂತ ಸುಪ್ರೀಂ ಕೋರ್ಟ್ ಪೂರ್ಣ ಸಂಖ್ಯೆಯ ಜಡ್ಜ್‌ಗಳನ್ನು ಹೊಂದಿದೆ. ಆದರೆ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ಕಾಡುತ್ತಿದ್ದು, ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ದೇಶದ 25 ಹೈಕೋರ್ಟ್‌ಗಳಲ್ಲಿ ಜಡ್ಜ್‌ಗಳ ಕೊರತೆ ಇದೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ 35 ಖಾಯಂ ಮತ್ತು 41 ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ 76 ಹುದ್ದೆಗಳು ಖಾಲಿ ಇದ್ದು, ದೇಶದಲ್ಲಿ ಅತೀ ಹೆಚ್ಚು ನ್ಯಾಯಾಧೀಶರ ಕೊರತೆ ಇರುವ ಪ್ರದೇಶವಾಗಿದೆ. ನಂತರದಲ್ಲಿ ಬಾಂಬೆ 26, ಪಂಜಾಬ್ ಮತ್ತು ಹರಿಯಾಣ 25, ಕಲ್ಕತ್ತಾ 24, ಮದ್ರಾಸ್ 19, ಪಾಟ್ನಾ 18, ದೆಹಲಿ 16, ಮತ್ತು ರಾಜಸ್ಥಾನ 7 ಉತ್ತರಾಖಂಡದಲ್ಲಿ 2 ಮತ್ತು ತ್ರಿಪುರದಲ್ಲಿ 1 ಖಾಲಿ ಹುದ್ದೆಗಳಿವೆ. 25 ರಾಜ್ಯಗಳಲ್ಲಿ, ಸಿಕ್ಕಿಂ ಮತ್ತು ಮೇಘಾಲಯದ ಹೈಕೋರ್ಟ್‌ಗಳು ಮಾತ್ರ ಪೂರ್ಣ ಭರ್ತಿಯಾದ ಹುದ್ದೆಗಳೊಂದಿಗೆ ಕಾರ್ಯನಿರ್ವಹಿಸುತ್ತವೆ.
ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್ (NJDG) ನ ದತ್ತಾಂಶ ಪ್ರಕಾರ, ಹೈಕೋರ್ಟ್‌ಗಳಲ್ಲಿ 67 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್‌ನಲ್ಲಿ 60,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ತೋರಿಸುತ್ತದೆ. ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೂ, ಹೈಕೋರ್ಟ್‌ಗಳು ಅತಿಯಾದ ಕೆಲಸದ ಹೊರೆಯಿಂದ ಬಳಲುತ್ತಿವೆ.
ನಿವೃತ್ತ ಪಾಟ್ನಾ ಹೈಕೋರ್ಟ್ ನ್ಯಾಯಾಧೀಶ ಮತ್ತು ಕಾನೂನು ತಜ್ಞ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಮಾತನಾಡಿ, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಬಾಕಿ ಪ್ರಕರಣಗಳ ವಿಲೇವಾರಿಯ ತೊಂದರೆಗಳಿಗೆ ಕಾರಣವಾಗಿದೆ. ಅಂತಿಮವಾಗಿ, ದಾವೆದಾರರು ಇದರಿಂದ ತೊಂದರೆಗೊಳಗಾಗುತ್ತಾರೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದು ಈಗಿರುವ ನ್ಯಾಯಾಧೀಶರಿಗೆ ಅನಗತ್ಯ ಕೆಲಸದ ಹೊರೆಗೆ ಕಾರಣವಾಗುತ್ತವೆ, ಇದು ತೀರ್ಪುಗಳ ಗುಣಮಟ್ಟ ರಾಜಿ ಮಾಡಿಕೊಳ್ಳುವುದಕ್ಕೆ ಕಾರಣವಾಗಬಹುದು. ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧೀಶರನ್ನು ನೇಮಿಸಲು ವಿವೇಚನಾಯುಕ್ತ ಆಯ್ಕೆ ಇರಬೇಕು ಎಂದಿದ್ದಾರೆ.