ಉಡುಪಿ: ಪತಿಗೆ ವಿಷ ಸೇರಿಸಿ ಕೈ ತುತ್ತು ತಿನ್ನಿಸಿ ಪತ್ನಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಆರೋಪಿ ಪ್ರತಿಮಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿಮಾ ಪತಿ ಬಾಲಕೃಷ್ಣ (44) ಹತ್ಯೆಯಾದ ವ್ಯಕ್ತಿ. ಪತಿ ಬಾಲಕೃಷ್ಣ ಸಾಯುವುದಕ್ಕೂ ಮುನ್ನ ಕಳೆದ 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲುತ್ತಿದ್ದರು. ಬಾಲಕೃಷ್ಣ ಅವರನ್ನು ಕೆಎಂಸಿ, ನಿಮಾನ್ಸ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದರೆ, ಇದು ಸಹಜ ಸಾವಲ್ಲ, ಕೊಲೆ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು.
ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕೃಷ್ಣ ಅವರನ್ನು ಮುಗಿಸಲು ಪ್ರತಿಮಾ ಮತ್ತು ಈಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಸಂಚು ರೂಸಿಪಿಸಿದ್ದರು. ಪತಿ ಕಾಯಿಲೆಯಿಂದ ಮೃತಪಟ್ಟ ಅಂತ ನಂಬಿಸಲು ಪತ್ನಿ ಪ್ರತಿಮಾ, ಬಾಲಕೃಷ್ಣ ಅವರಿಗೆ ಸ್ಲೋ ಪಾಯ್ಸನ್ ನೀಡುತ್ತಿದ್ದಲು ಎನ್ನಲಾಗಿದೆ. ಸ್ಲೋ ಪಾಯ್ಸನ್ ಅನ್ನು ಪ್ರಿಯಕರ ದಿಲೀಪ್ ಹೆಗ್ಡೆ ತಂದುಕೊಟ್ಟಿದ್ದಾನೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾಳೆ.
ಪ್ರತಿಮಾ ಪತಿ ಬಾಲಕೃಷ್ಣ ಅವರಿಗೆ ಅನ್ನದಲ್ಲಿ ರಕ್ತದ ಕ್ಯಾನ್ಸರ್ಗೆ ನೀಡುವ Arsenic Trioxide ಎಂಬ ಕಿಮೋಥೆರಪಿ ಮದ್ದು ಬೆರಸಿ ನೀಡುತ್ತಿದ್ದಳು. ಅನ್ನದ ಜೊತೆ ಮದ್ದನ್ನು ಬೆರೆಸಿ ನೀಡುತ್ತಿದಳು. ವಿಷ ಇದೆ ಎಂದು ಅರಿಯದೆ ಬಾಲಕೃಷ್ಣ ಊಟ ಮಾಡುತ್ತಿದ್ದರು. ಹಲವು ಬಾರಿ ವಿಷದ ಅನ್ನವನ್ನೇ ಪ್ರತಿಮಾ ಕೈ ತುತ್ತು ಮಾಡಿ ತಿನ್ನಿಸಿದ್ದಳು ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದರಿಂದಾಗಿ ಬಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಆನಂತರ ಉಸಿರುಗಟ್ಟಿಸಿದ್ದಾಳೆ ಎನ್ನಲಾಗಿದೆ.