ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿಯಲ್ಲಿ (ADA Recruitment 2025) ಖಾಲಿ ಇರುವ 23 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರಾಜೆಕ್ಟ್ ಆಡ್ಮಿನ್ ಆಫೀಸರ್, ಆಡ್ಮಿನ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಜೂನ್ 13 ಕೊನೆಯ ದಿನವಾಗಿದೆ. ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 35 ಸಾವಿರ ರೂಪಾಯಿಯಿಂದ 59 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
ಪ್ರಾಜೆಕ್ಟ್ ಆಡ್ಮಿನ್ ಅಸಿಸ್ಟೆಂಟ್ (PAA) : 09
ಸೀನಿಯರ್ ಆಡ್ಮಿನ್ ಅಸಿಸ್ಟೆಂಟ್ (PSAA) : 06
ಪ್ರಾಜೆಕ್ಟ್ ಆಡ್ಮಿನ್ ಅಧಿಕಾರಿ (PAO) : 04
ಟೆಕ್ನಿಕಲ್ ಅಸಿಸ್ಟೆಂಟ್ (PTA) : 02
ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (PSTA) : 02
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ ಸೈಟ್ ಆಗಿರುವ https://www.ada.gov.in/ ಗೆ ಭೇಟಿ ನೀಡಬೇಕು
- ADA recruitment 2025 ಮೇಲೆ ಕ್ಲಿಕ್ ಮಾಡಿ
- ಅಗತ್ಯ ಮಾಹಿತಿಯನ್ನು ಒದಗಿಸಿ
- ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ
- ಭವಿಷ್ಯದ ಅಗತ್ಯಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಂಡಿರಿ