ಸೀತಾ ರಾಮ ಖ್ಯಾತಿಯ ನಟಿ ವೈಷ್ಣವಿಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟಿ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಮನ ಗೆದ್ದಿದ್ದ ವೈಷ್ಣವಿಗೌಡ ಛತ್ತೀಸಘಡ ಮೂಲದ ಇಂಡಿಯನ್ ಏರ್ಫೋರ್ಸ್ ನಲ್ಲಿ ಫ್ಲೈಟ್ ಲಿಫ್ಟಿನೆಂಟ್ ಆಗಿರುವ ಹುಡುಗನ ಜೊತೆಗೆ ವಿವಾಹವಾಗಿದ್ದಾರೆ. ಕೆಲವು ದಿನಗಳ ಹಿಂದೆ ಅರಿಶಿನ ಶಾಸ್ತ್ರದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು, ಇದೀಗ ಮದುವೆಯ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮದುವೆಯಲ್ಲಿ ವೈಷ್ಣವಿ ಗೌಡ ಗೆಳತಿಯರಾದ ಅಮೂಲ್ಯ, ನಿವೇದಿತಾ ಗೌಡ , ವಿಜಯ್ ಸೂರ್ಯ, ಐಶ್ವರ್ಯ ಸಾಲಿಮಠ ಸೇರಿದಂತೆ ನಟ ನಟಿಯರು ಡಾನ್ಸ್ ಮಾಡುವುದರ ಮೂಲಕ ವಧು ವರರಿಗೆ ಶುಭಾಶಯ ಕೋರಿದ್ದಾರೆ.