ಇತ್ತೀಚೆಗೆ ಕನ್ನಡದ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಮದುವೆಯ ಪರ್ವ ಅಂತಲೇ ಹೇಳಬಹುದು. ಸಾಲು ಸಾಲು ನಟಿಯರು ಮದುವೆಯಾಗುತ್ತಿದ್ದಾರೆ. ಈ ಸಾಲಿನಲ್ಲಿ ಇದೀಗ ನಟಿ ಸುಪ್ರೀತಾ ಸತ್ಯನಾರಾಯಣ್ ಕೂಡ ಒಬ್ಬರು.
ಕಳೆದ ಮಾರ್ಚ್ ತಿಂಗಳಲ್ಲಿ ಸುಪ್ರೀತಾ ಚಂದನ್ ಶೆಟ್ಟಿ ಎಂಬುವವರ ಜೊತೆ ಎಂಗೇಜ್ ಆಗಿದ್ದರು. ಅದಾದ ಬಳಿಕ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ, ಇದೀಗ ಚಂದನ್ ಶೆಟ್ಟಿ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತಿದ್ದಾರೆ. ಇವರ ಮದುವೆಗೆ ಸಾಕಷ್ಟು ಜನ ಸ್ಯಾಂಡಲ್ವುಡ್ ನಟ ನಟಿಯರು ಭಾಗಿಯಾಗಿದ್ದು, ಶುಭಾಶಯಗಳು ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ನಟಿ ಸುಪ್ರೀತಾ ಸತ್ಯನಾರಾಯಣ ಅವರಿಗೆ ವಿಶ್ ಗಳು ಹರಿದುಬರುತ್ತಿವೆ.
ಸುಪ್ರೀತಾ ಅವರ ಬಗ್ಗೆ ಹೇಳುವುದಾದರೆ, ಸೀತಾ ವಲ್ಲಭ ಧಾರ್ವಾಹಿ ನಟಿ ಕನ್ನಡದ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ನಟಿ ಸೀತಾ ವಲ್ಲಭ ಧಾರವಾಹಿಯ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಇವರು ರಹಧಾರಿ ಚಿತ್ರದ ಮೂಲಕ ಚಂದನವನಕ್ಕೂ ಕಾಲಿಟ್ಟಿದ್ದರು.
ಸುಪ್ರೀತಾ ಮದುವೆ ಆದ ಹುಡುಗನ ಬಗ್ಗೆ ನೋಡುವುದಾದರೆ ಕೊಡಗು ಮೂಲತ ಚಂದನ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಡಿಜಿಟಲ್ ಕ್ರಿಯೇಟರ್ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ಈ ಮದುವೆಗೆ ನೇಹಾ ಗೌಡ, ರಶ್ಮಿಕಾ ಪ್ರಭಾಕರ್ , ಸುಜಾತ ಅಕ್ಷಯ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿ ಶುಭ ಹಾರೈಸಿದ್ದಾರೆ.