ಉಡುಪಿ: ಬಾಲಿವುಡ್ ಚೆಲುವೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ರಾಜ್ಯಕ್ಕೆ ಭೇಟಿ ನೀಡಿ, ಟೆಂಪಲ್ ರನ್ ನಡೆಸಿದ್ದಾರೆ.
ಈ ವೇಳೆ ಅವರು ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ (Sri Hosa Marigudi Temple) ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಪುವಿನಲ್ಲಿ ಹತ್ತು ದಿನಗಳ ಕಾಲ ಅದ್ಧೂರಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಹೊಸ ಮಾರಿಗುಡಿ ನೂತನ ದೇವಸ್ಥಾನದ ವೀಕ್ಷಣೆ ಮಾಡಿದ ಶಿಲ್ಪಾ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಾರಿಗುಡಿಯ ನಿರ್ಮಾಣ, ಮರದ ಕೆತ್ತನೆ, ಚಿನ್ನದ ಗದ್ದಿಗೆ ಕಂಡು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಿಲ್ಪಾ ಶೆಟ್ಟಿ ಅವರನ್ನು ಆಡಳಿ ಮಂಡಳಿ ಸನ್ಮಾನ ಮಾಡಿತು. ತಂಗಿ ಶಮಿತಾ ಶೆಟ್ಟಿ, ತಾಯಿ ಮತ್ತು ಅವರ ಕುಟುಂಬದ ಜೊತೆ ಬಾಲಾಲಯದಲ್ಲಿರುವ ಮಾರಿಯಮ್ಮನ ದರ್ಶನ ಮಾಡಿದ್ದಾರೆ. ಆನಂತರ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ.