ಮುಂಬೈ : ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ತುರ್ತುನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಆರೋಗ್ಯದ ಸ್ಥಿತಿ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ತಾಯಿಯ ಆರೈಕೆಗಾಗಿ ಶಿಲ್ಪಾ ಶೆಟ್ಟಿ ಕೂಡ ಆಸ್ಪತ್ರೆಯಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ಮಗಳು ಶಮಿತಾ ಶೆಟ್ಟಿ ಜೊತೆ ಸುನಂದಾ ಶೆಟ್ಟಿ ಅವರು ವಾಸವಿದ್ದರು. ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿರೋದ್ರಿಂದ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಮಗಳು ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಸುನಂದಾ ಶೆಟ್ಟಿ ಅದ್ದೂರಿಯಾಗಿ ದೀಪಾವಳಿ ಆಚರಿಸಿದ್ದರು. ಅಂದಹಾಗೆ 9 ವರ್ಷಗಳ ಹಿಂದೆ ಶಿಲ್ಪಾ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಹಾಗೂ ತಂಗಿ ಶಮಿತಾ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಶಿಲ್ಪಾ ಇದೀಗ ಕೋರ್ಟ್, ಕೇಸ್ ಎಂದು ಅಲೆಯುತ್ತಿದ್ದಾರೆ.
60 ಕೋಟಿ ವಂಚನೆ ಪ್ರಕರಣ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಮೇಲಿದೆ. ಈ ಸಂಬಂಧ ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ತನಿಖೆ ಜಾರಿಯಲ್ಲಿದೆ. ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿಯ ವಿದೇಶ ಪ್ರಯಾಣದ ಮೇಲೆ ಕೋರ್ಟ್ ನಿಷೇಧ ಹೇರಿದೆ.
ಇದನ್ನೂ ಓದಿ : ಪ್ರೊ ಕಬಡ್ಡಿ ಫೈನಲ್‌ಗೆ ವೇದಿಕೆ ಸಜ್ಜು | ಟ್ರೋಫಿಗಾಗಿ ದಬಾಂಗ್ ಡೆಲ್ಲಿ-ಪುಣೇರಿ ಪಲ್ಟನ್ ನಡುವೆ ಹೈವೋಲ್ಟೇಜ್ ಫೈಟ್!



















