ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಮೂಲಕ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿ ಹಲ್ ಚಲ್ ಎಬ್ಬಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆ ಇದೀಗ ಮತ್ತೆ ಟ್ರೋಲ್ ಗೆ ಒಳಗಾಗಿದ್ದಾರೆ.
ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿಗೆ ಆಹಾರವಾಗೋ ನಟಿ ಸಂಯುಕ್ತ ಹೆಗ್ಡೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಗೆಳತಿಯ ಮದುವೆಯಲ್ಲಿ ಸೆನ್ಸೆಷನ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಂಯುಕ್ತಾ ಹೆಗ್ಡೆ ಆಪ್ತೆ ಎನಿಸಿಕೊಂಡಿರುವ ಪೂಜಿತಾ ಭಾಸ್ಕರ್ ಅವರ ಮದುವೆಯಲ್ಲಿ ಗೆಳತಿಗೆ ಲಿಪ್ ಟು ಲಿಪ್ ಕಿಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ನಟಿಯರು ಈ ರೀತಿ ಫೋಟೋ ಹಂಚಿಕೊಂಡಾಗ ಟ್ರೋಲ್ ಆಗುವುದು ಸಾಮಾನ್ಯ. ಆದರೆ, ಸಂಯುಕ್ತ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಫೋಟೋ ನೋಡಿದ ಅನೇಕರು ಕಮೆಂಟ್ ಮಾಡುತ್ತಿದ್ದು, ನಿಮ್ಮದೇ ಮದುವೆ ಆಯಿತು ಎಂದುಕೊಂಡೆ. ಪುಣ್ಯ ಹಾಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.