ಬೆಂಗಳೂರು: ನಟಿ ರಕ್ಷಿತಾ ಅವರು ದಿವಂಗತ ಪುನೀತ್ ರಾಜಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ರಕ್ಷಿತಾ ಹಾಗೂ ಪುನೀತ್ ಅಭಿನಯದ ಮೊದಲ ಸಿನಿಮಾ ‘ಅಪ್ಪು’, ಈಗ ಮತ್ತೆ ತೆರೆಗೆ ಬರಲು ಸಿದ್ಧವಾಗಿದೆ. ಅಪ್ಪು ಸಿನಿಮಾ ಮಾ.14ರಂದು ಮರು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪ್ಪು ಚಿತ್ರದ ಬಗ್ಗೆ ಹಾಗೂ ಆ ದಿನಗಳ ಬಗ್ಗೆ ರಕ್ಷಿತಾ ಮಾತನಾಡಿದ್ದಾರೆ.
‘ಪುನೀತ್ ಜೊತೆ ನಟಿಸಲು, ಡ್ಯಾನ್ಸ್ ಮಾಡಲು ನನಗೆ ಕಷ್ಟ ಆಗುತ್ತಿತ್ತು. ಇಂದಿಗೂ ಅವರ ರೀತಿ ಡ್ಯಾನ್ಸ್ ಮಾಡುವವರು ಕನ್ನಡ ಚಿತ್ರರಂಗದಲ್ಲಿ ಯಾರೂ ಇಲ್ಲ’ ಎಂದು ಹಾಡಿ ಹೊಗಳಿದ್ದಾರೆ.