ಬೆಂಗಳೂರು: ಬೇಸಿಗೆಯ ರಜಾ ಶುರುವಾಗಿದೆ. ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ಸ್ಯಾಂಡಲ್ ವುಡ್ ಪ್ರಿನ್ಸ್ ರಾಧಿಕಾ ಪಂಡಿತ್ ಸಮ್ಮರ್ ವೆಕೇಶನ್ ನಲ್ಲಿದ್ದಾರೆ. ತಮ್ಮ ಇಬ್ಬರು ಮಕ್ಕಳ ಜೊತೆ ರಾಧಿಕಾ ಪಂಡಿತ್ ಕಡಲಕಿನಾರೆಗೆ ಭೇಟಿ ನೀಡಿದ್ದಾರೆ.
ಬೀಚ್ ನಲ್ಲಿ ಮಕ್ಕಳ ಜೊತೆ ರಾಧಿಕಾ ಪಂಡಿತ್ ಫುಲ್ ಜಾಲಿ ಮೂಡ್ ನಲ್ಲಿದ್ದಾರೆ. ತಮ್ಮ ಇಬ್ಬರು ಮಕ್ಕಳು ಯಥರ್ವ್ ಹಾಗೂ ಐರಾ ಜೊತೆ ನಟಿ ಬಿಂದಾಸಾಗಿ ಫನ್ ಮಾಡುತ್ತಿದ್ದಾರೆ. ಸದ್ಯ ಮಕ್ಕಳಿಗಾಗಿಯೇ ತಮ್ಮ ಸಂಪೂರ್ಣ ಸಮಯ ನೀಡಿರುವ ರಾಧಿಕಾ ಪಂಡಿತ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಪ್ಯಾನ್ಸ್ ಫ್ಯಾಮಿಲಿ ಜೊತೆ ಯಾವಾಗಲೂ ಹೀಗೆ ಹ್ಯಾಪಿ ಆಗಿರಿ ಅಂತ ವಿಶ್ ಮಾಡಿದ್ದಾರೆ. ವೈರಲ್ ಫೋಟೋ ಕಂಡು ಅಭಿಮಾನಿಗಳು ಕೂಡ ಖುಷಿ ಪಡುತ್ತಿದ್ದಾರೆ.