ಬಾಲಿವುಡ್ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮ ಗಂಡು ಮಗುವಿಗೆ ನೀರ್ (Neer) ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ. ಬುಧವಾರ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ತಮ್ಮ ಪುಟ್ಟ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇಬ್ಬರೂ ಮಗುವಿನ ಪಾದಗಳನ್ನು ಚುಂಬಿಸುತ್ತಿರುವ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ.

ಒಂದೆರಡು ಮುದ್ದಾದ ಚಿತ್ರಗಳನ್ನು ಅಪ್ಲೋಡ್ ಮಾಡಿರುವ ದಂಪತಿ, ಮಗುವಿನ ಮುಖವನ್ನು ಹೈಡ್ ಮಾಡಿದ್ದಾರೆ. ಅವರ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಪರಿಣಿತಿ ಮತ್ತು ರಾಘವ್ ಹೀಗೆ ಬರೆದಿದ್ದಾರೆ, “ನಮ್ಮ ಹೃದಯಗಳು ಜೀವನದ ಶಾಶ್ವತ ಹನಿಯಲ್ಲಿ ಶಾಂತಿಯನ್ನು ಕಂಡುಕೊಂಡವು. ನಾವು ಅವನಿಗೆ ನೀರ್ ಎಂದು ಹೆಸರಿಸಿದ್ದೇವೆ -ಶುದ್ಧ, ದೈವಿಕ, ಅಪರಿಮಿತ ಎಂದು ಬರೆದಿದ್ದಾರೆ.
ಕುತೂಹಲಕಾರಿಯಾಗಿ, ನೀರ್ ಎಂಬುದು ಪರಿಣಿತಿ ಮತ್ತು ರಾಘವ್ ಅವರ ಹೆಸರುಗಳ ಸಂಯೋಜನೆಯಾಗಿದ್ದು, ಪೋಸ್ಟ್ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಮತ್ತು ಸ್ನೇಹಿತರು ದಂಪತಿಗೆ ಮತ್ತು ಅವರ ಮಗುವಿಗೆ ಶುಭಾಶಯ ತಿಳಿಸಿದ್ದಾರೆ.
ನೀರ್ ಎಂದರೇನು?
ನೀರ್ ಎಂದರೆ ಸಂಸ್ಕೃತದಲ್ಲಿ ನೀರು ಎಂದೇ ಅರ್ಥ. ಕನ್ನಡದಲ್ಲಿ ನಾವು ನೀರು ಎಂದರೆ ಸಂಸ್ಕೃತದಲ್ಲಿ ನೀರ್ ಎನ್ನುತ್ತೇವೆ. ಈ ಒಂದು ಅರ್ಥದಲ್ಲಿಯೇ ಅವರು ಮಗನಿಗೆ ನೀರ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ : ಕೋರ್ಟ್ ಕಲಾಪದ ವೇಳೆಯೇ ಮಹಿಳೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ, ಕೊಲೆಗೆ ಯತ್ನ | ಆರೋಪಿ ಬಂಧನ



















