ಇತ್ತೀಚೆಗೆ ಕೆಲವು ನಟ ನಟಿಯರು ತಮ್ಮ ವೈಯಕ್ತಕ ಬದುಕಿನಲ್ಲಿ ಡಿವೋರ್ಸ್ ಪಡೆದುಕೊಂಡು ಒಬ್ಬಂಟಿಯಾಗಿ ಲೈಫ್ ಲೀಡ್ ಮಾಡುತ್ತಿರುವ ಸಂಗತಿಗಳು ಹೆಚ್ಚಾಗಿವೆ. ಇನ್ನು ಇವೆಲ್ಲ ಒಂದು ಭಾಗವಾದರೆ, ತಾನಾಯ್ತು ತನ್ನ ಫ್ಯಾಮಿಲಿ ಆಯ್ತು ಅಂತ ನೆಮ್ಮದಿಯಿಂದ ಲೈಫ್ ಲೀಡ್ ಮಾಡುವ ನಟಿಯರು ಇನ್ನೊಂದೆಡೆ ಇದ್ದಾರೆ. ಅಂತಹ ಸಾಲಿನಲ್ಲಿ ನಟಿ ಮೇಘನಾ ರಾಜ್ ಕೂಡ ಒಬ್ಬರು.
ಈ ನಟಿಯ ಬಗ್ಗೆ ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ವೈರಲ್ ಆಗಿತ್ತು. ನಟ ವಿಜಯರಾಘವೇಂದ್ರ ಜೊತೆ ಮತ್ತೆ ಮದುವೆ ಆಗುತ್ತಾರೆ ಎನ್ನುವ ವಿಷಯ ಕೇಳಿ ಬರುತ್ತಿತ್ತು. ತನ್ನ ಗಂಡನನ್ನು ಕಳೆದುಕೊಂಡು ಮಗನ ಜೊತೆ ನೆಮ್ಮದಿಯಿಂದ ಇರುವ ಈ ನಟಿ ಇವೆಲ್ಲ ಪ್ರಶ್ನೆಗಳಿಗೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ.
ನಾನು ನನ್ನ ಜೀವನದಲ್ಲಿ ಎರಡನೇ ಮದುವೆ ಆಗುವ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದೆ. ಅದು ಎಲ್ಲರಿಗೂ ಅರ್ಥ ಆಗಿಲ್ಲ. ಹೀಗಿದ್ದರೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಅರ್ಥವಾಗದೆ ಜನರು ಮಾತನಾಡಿದ್ದಾರೆ. ಹೀಗಾಗಿ ಮತ್ತೆ ನಾನು ಈ ಬಗ್ಗೆ ಮಾತಾಡಿ, ಅವರು ಇನ್ನೊಂದಿಷ್ಟು ಮಾತನಾಡೋಕೆ ಆಹಾರ ಕೊಡುವುದಿಲ್ಲ. ಬೇರೆ ನಟರ ಜೊತೆ ನನ್ನ ಮದುವೆ ಆಗತ್ತೆ ಅಂತ ಗಾಸಿಪ್ ಮಾಡುತ್ತಿದ್ದಾರೆ. ಎಷ್ಟು ಖುಷಿಯಾಗತ್ತೋ ಅಷ್ಟು ಮಾತನಾಡಲಿ ಅಂತ ಖಡಕ್ ಉತ್ತರ ಕೊಟ್ಟಿದ್ದಾರೆ.