ರಾಮನಗರ: ವಂಡರ್ ಲಾ ನ್ಯೂ ಗೇಮ್ ವಾಟರ್ ಪಾರ್ಕ್ ನಲ್ಲಿ ನೂತನ ಥೀಮ್ ಗೆ ನಟಿ ಅಶಿಕಾ ರಂಗನಾಥ್ ಚಾಲನೆ ನೀಡಿದ್ದಾರೆ.
“ಮಿಷನ್ ಇಂಟರ್ ಸ್ಟೆಲ್ಲರ್” ಎಂಬ ಅತಿದೊಡ್ಡ ಎಲ್ಇಡಿ ಸ್ಕ್ರೀನ್ ಥಿಯೇಟರ್ ನ್ನು ನಟಿ ಅನಾವರಣಗೊಳಿಸಿದ್ದಾರೆ. ಬಾಹ್ಯಾಕಾಶ, ಮತ್ಸ್ಯಲೋಕ, ಮರುಭೂಮಿ ಪ್ರಯಾಣದ ರೋಮಾಂಚನಕಾರಿ ಹಾಗೂ ನೈಜತೆಯ ಅನುಭವ ನೀಡುವ ಮಿಷನ್ ಇಂಟರ್ ಸ್ಟೆಲ್ಲರ್ ಗೆ ಚಾಲನೆ ನೀಡಿದರು. ಇದು ಭಾರತದಲ್ಲೇ ಅತಿದೊಡ್ಡ ಎಲ್ಇಡಿ ಸ್ಟ್ರೀನ್ ಥಿಯೇಟರ್ ಆಗಿದೆ.
ಈ ಮೂಲಕ ವಂಡರ್ ಲಾ ವಾಟರ್ ಪಾರ್ಕ್ ಗೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಮನರಂಜನೆ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಒಂದು ಬಾರಿಗೆ 60 ಮಂದಿ ಕೂತು ವೀಕ್ಷಣೆ ಮಾಡಬುದಾದ ಹೈಡ್ರಾಲಿಕ್ ಲಿಫ್ಟ್ ಚೇರ್, ಇಟಲಿ ಮೂಲದ ಅತ್ಯಾಧುನಿಕ ಸೌಂಡ್ ಸಿಸ್ಟಮ್, ಹೈಟೆಕ್ ಲೇಸರ್ ಪ್ರೊಜೆಕ್ಷನ್ ವ್ಯವಸ್ಥೆ ಮಾಡಲಾಗಿದೆ.
ನೂತನ ಥೀಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಂಡರ್ ಲಾ ಎಂಡಿ ಅರುಣ್ ಚಿಟ್ಟಿಲಪ್ಪಿಲ್ಲಿ, ಸಿಓಓ ಧೀರನ್ ಚೌಧರಿ, ವಂಡರ್ ಲಾ ಬೆಂಗಳೂರು ಪಾರ್ಕ್ ಮುಖ್ಯಸ್ಥ ರುದ್ರೇಶ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ನಟಿ, ಬೇರೆ ದೇಶಗಳಲ್ಲಿ ಇಂತಹ ಟೆಕ್ನಾಲಜಿ ನೋಡಿದ್ದೆ. ಇದನ್ನು ಬೆಂಗಳೂರಿನಲ್ಲಿಯೂ ನೋಡಿ ಖುಷಿಯಾಯಿತು. ಬಾಹ್ಯಾಕಾಶ ಹೇಗಿರುತ್ತದೆ ಅಂತಾ ಟಿವಿಯಲ್ಲಿ ಕೂತು ನೋಡುತ್ತಿದ್ದೆ. ಅದನ್ನು ಬೃಹತ್ ಎಲ್ಇಡಿ ವಾಲ್ ನಲ್ಲಿ ನೈಜ ಅನುಭವ ಪಡೆಯುವ ಅವಕಾಶ ಇಲ್ಲಿ ಇದೆ. ವಂಡರ್ ಲಾ ಇಂತದೊಂದು ಅವಕಾಶ ಕಲ್ಪಿಸಿರುವುದು ತುಂಬಾ ಸಂತಸದ ಸಂಗತಿ ಎಂದರು.