ನವದೆಹಲಿ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಅತ್ತೆ ವೀನಾ ಕೌಶಲ್ ಜತೆ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಕ್ಕೆ ಭೇಟಿ ನೀಡಿದರು.
ಅವರ ಈ ಭೇಟಿಯ ಹಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿವೆ. ಕತ್ರಿನಾ ಪೌಡರ್ ಪಿಂಕ್ ಬಣ್ಣದ ಭಾರತೀಯ ಉಡುಪು ತೊಟ್ಟು ಕಾಣಿಸಿಕೊಂಡಿದ್ದು, ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಜತೆ ಮಾತುಕತೆ ನಡೆಸಿದ್ದಾರೆ.
ಪಾರ್ಮಾರ್ಥ ನಿಕೇತನ, ಪುಜ್ಯ ಸ್ವಾಮಿ ಚಿದಾನಂದ ಅವರ ನೇತೃತ್ವದ ಆಧ್ಯಾತ್ಮಿಕ ಆಶ್ರಮ ಈ ಬಗ್ಗೆ ಟ್ವೀಟ್ ಮಾಡಿದ್ದು “ಕತ್ರಿನಾ ಕೈಫ್ ಮಹಾಕುಂಭದಲ್ಲಿ ಭಾಗಿಯಾದರು. ಪೂಜ್ಯಸ್ವಾಮಿಜಿ ಮತ್ತು ಸಾಧ್ವಿಭಗವತಿ ಅವರನ್ನು ಭೇಟಿ ಮಾಡಿದರು. ಆಧ್ಯಾತ್ಮದೊಂದಿಗೆ ಮನರಂಜನೆ ಬೆರೆತಿದ್ದು ಯುವಜನರಿಗೆ ಪ್ರೇರಣೆ ಸಿಗಲಿದೆ ,” ಎಂದು ಹೇಳಲಾಗಿದೆ.
ಮಹಾ ಕುಂಭಕ್ಕೆ ಭಾರತೀಯ ಚಿತ್ರರಂಗದ ಹಲವಾರು ಭೇಟಿ ನೀಡಿದ್ದರು. ಅವರಲ್ಲಿ ಕತ್ರಿನಾ ಕೂಡ ಒಬ್ಬರು. ಅಕ್ಷಯ್ ಕುಮಾರ್, ಸೋನಾಲಿ ಬೇಂದ್ರೆ, ವಿದ್ಯುತ್ ಜಾಮ್ವಾಲ್, ಬೋನಿ ಕಪೂರ್, ವಿಕ್ಕಿ ಕೌಶಲ್, ತಮನ್ನಾ ಭಾಟಿಯಾ, ನಿರ್ಮತ್ ಕೌರ್ ಮತ್ತು ಚಂದನ್ ರಾಯ್ ಸಾನ್ಯ ಮಹಾ ಕುಂಭದ ಪವಿತ್ರ ನೀರಿನಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವರ “ಛಾವಾ” ಚಿತ್ರದಲ್ಲಿನ ಅಭಿನಯವನ್ನು ಹೊಗಳಿದ್ದಾರೆ. “ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸವನ್ನು ಹೊಂದಿರುವ ಸಿನಿಮಾ ಅದಾಗಿದೆ. ಈ ಸಿನಿಮಾದ ಕೊನೆಯ 40 ನಿಮಿಷಗಳು ನಮ್ಮನ್ನು ನಿಬ್ಬೆರಗಾಗಿಸುತ್ತದೆ ,” ಎಂದು ಕತ್ರಿನಾ ಮೆಚ್ಚುಗೆಯ ಮಾತುಗಳನ್ನಾಡಿದ್ದರು.