ನಟಿ ಪ್ರಿಯಾಂಕಾ ಚೋಪ್ರಾ ಶೂಟಿಂಗ್ ವೇಳೆ ಗಾಯ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
ನಟಿ ಪ್ರಿಯಾಂಕಾ ಅವರು ಗಾಯಕ ನಿಕ್ ಜೋನಸ್ ರನ್ನು ಮದುವೆಯಾಗಿ ಅಮೆರಿಕದಲ್ಲಿದ್ದಾರೆ. ಹೀಗಾಗಿ ಅವರಿಗೆ ಹಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆ. ಈ ಮಧ್ಯೆ ಪ್ರಿಯಾಂಕಾ ಚೋಪ್ರಾ ಶೂಟಿಂಗ್ ವೇಳೆ ಗಾಯ ಮಾಡಿಕೊಂಡಿದ್ದಾರೆ. ಈ ಕುರಿತು ಸ್ವತಃ ತಾವೇ ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೂ ಕೆಲವೊಮ್ಮೆ ಅವಘಡಗಳು ಸಂಭವಿಸಿ ಬಿಡುತ್ತವೆ. ಈಗ ಪ್ರಿಯಾಂಕಾ ಚೋಪ್ರಾಗೂ ಹಾಗೆಯೇ ಆಗಿದೆ. ‘ದಿ ಬ್ಲಫ್’ ಸಿನಿಮಾ ಶೂಟಿಂಗ್ ವೇಳೆ ಅವರ ಕತ್ತಿನ ಭಾಗಕ್ಕೆ ಸರಿಯಾಗಿ ಮಾರ್ಕ್ ಬಿದ್ದಿದೆ ಎನ್ನಲಾಗಿದೆ.
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಹಲವು ಆ್ಯಕ್ಷನ್ ಸಿನಿಮಾ ಮಾಡಿದ್ದಾರೆ. ಈ ಮೊದಲು ಕೂಡ ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಗಾಯಗೊಂಡಿದ್ದರು. ಆದರೆ, ಅವರು ಆ್ಯಕ್ಷನ್ ಸಿನಿಮಾಗಳಿಂದ ದೂರ ಹೋಗಿಲ್ಲ.

