ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ತಮ್ಮ ಮಗಳೊಟ್ಟಿಗಿನ ಸಂತಸದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಉದ್ಯಾನದಲ್ಲಿ ಪುತ್ರಿ ನೇಸರಳೊಟ್ಟಿಗೆ ಆಟವಾಡುತ್ತಾ ನಗುವಿನೊಂದಿಗೆ ಕಳೆದಿದ್ದಾರೆ. ಈ ವೇಳೆ ಅದಿತಿ ಪತಿ ಯಶಸ್ ಕೂಡಾ ಜೊತೆಯಲ್ಲಿದ್ದು, ಮಗಳೊಟ್ಟಿಗೆ ಆಟವಾಡಿ ಸಮಯ ಕಳೆದಿದ್ದಾರೆ.

ಮೊನ್ನೆಯಷ್ಟೇ ಪುತ್ರಿಯ ಹುಟ್ಟು ಹಬ್ಬ ಆಚರಿಸಿದ್ದ ಅದಿತಿ ಮತ್ತು ಯಶಸ್ ದಂಪತಿ ಇದೀಗ ಮಗಳೊಟ್ಟಿಗಿನ ಆಟದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ತಮ್ಮ ನೆಚ್ಚಿನ ನಟಿಯ ನಗುವಿನ ಸಂಸಾರಕ್ಕೆ ಅಭಿಮಾನಿಗಳೂ ಮೆಚ್ಚಿ ಬಹುಪರಾಕ್ ಎಂದಿದ್ದಾರೆ.