ಬೆಂಗಳೂರು: ತವರಿನ ಸಿರಿ ಖ್ಯಾತಿಯ ನಟಿ ಆಶಿತಾ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಈಗ ಏಕಾಏಕಿ ಸಾಮಾಜಿಕ ಜಾಲತಾಣದ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ.
ಈ ನಟಿ ತಮ್ಮ ನೋವುಗಳನ್ನು ತನ್ನ ಯೂಟ್ಯೂಬ್ ಮೂಲಕ ಹಂಚಿಕೊಂಡು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಟಿ ಆಶಿತಾ ಮಾರಿಯ ಅವರಿಗೆ ಈಗ 40 ವರ್ಷ ವಯಸ್ಸು. ಒಂದು ಕಾಲದಲ್ಲಿ ಟಿವಿ ಪರದೆಯ ಮೇಲೆ ಹೀರೋಯಿನ್ ಆಗಿ ಮಿಂಚಿದ ಈ ಸುಂದರಿ ಈಗ ತನ್ನ ಒಬ್ಬಂಟಿ ಜೀವನದ ಬಗ್ಗೆ ಕಣ್ಣೀರು ಹಾಕಿದ್ದಾರೆ.

ನಟಿ ಅತ್ತಿದ್ದೇಕೆ?
ನಟಿ ಆಶಿತಾ ಈ ಹಿಂದೆ ಆರೋಗ್ಯದಲ್ಲಿ ಏರುಪೇರುಗಳನ್ನು ಅನುಭವಿಸಿದ್ದರು. ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಯಾರೂ ಜೊತೆಗೆ ಇರಲಿಲ್ಲ. ಆ ಸಂದರ್ಭದಲ್ಲಿ ನನಗೆ ಹೊಟ್ಟೆ ನೋವು ಕೂಡ ಕಾಣಿಸಿಕೊಂಡಿತ್ತು. ಯೇಸು ದೇವರನ್ನು ಪ್ರಾರ್ಥಿಸಿದೆ. ಹೀಗಾಗಿ ನನ್ನ ಒಬ್ಬ ಆತ್ಮೀಯ ಗೆಳೆಯ ಬಂದು ನನ್ನನ್ನು ಜೋಪಾನವಾಗಿ ನೋಡಿಕೊಂಡರು. ನನ್ನ ಸಮಸ್ಯೆಯನ್ನು ಅವರು ಅರ್ಥ ಮಾಡಿಕೊಂಡು ನನ್ನ ಜೊತೆ ಇದ್ದರು ಎಂದು ಹೇಳಿಕೊಂಡಿದ್ದಾರೆ. ಯೇಸು ನನ್ನನ್ನು ಒಬ್ಬಂಟಿಯಾಗಿ ಇರಲು ಬಿಡುವುದಿಲ್ಲ. ನನ್ನ ಸಹಾಯಕ್ಕೆ ಯಾರನ್ನಾದರೂ ಕಳುಹಿಸುತ್ತಾರೆ ಎಂದು ಕಣ್ಣೀರು ಸುರಿಸಿದ್ದಾರೆ. ಈ ವೇಳೆ ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಿಗೆ ಸಲಹೆ ಕೂಡ ನೀಡಿದ್ದಾರೆ.


















