ನಟಿ ರಾಧಿಕಾ ಪಂಡಿತ್ (Radhika Pandit)ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್ ಪ್ರೀತಿಯಿಂದ ಪತ್ನಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ಅದು ಏನು ಅಂದ್ರೆ, ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಎಂಬ ಹಾಡನ್ನು ತಾವೇ ಹಾಡಿ, ಪತ್ನಿ ಭಾವುಕರಾಗುವಂತೆ ಮಾಡಿದ್ದಾರೆ.
ಹಿರಿಯ ನಟ ಶಂಕರ್‌ನಾಗ್ ಅಭಿನಯದ ಸಿನಿಮಾದ ಹಾಡನ್ನು ಪತ್ನಿಯ ಹುಟ್ಟು ಹಬ್ಬದಂದು ಪ್ರೀತಿಯಿಂದ ಹಾಡಿದ್ದಾರೆ. ಪತಿ ಯಶ್ ಹಾಡಿದ ಹಾಡನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಹಾಡುವಾಗ ರಾಧಿಕಾ ಖುಷಿಯಿಂದ ಸಂಭ್ರಮಿಸಿದ್ದಾರೆ. ಯಾವಾಗಲೂ ಇದು ನಮ್ಮ ಹಾಡು. ಈಗಲೂ ಇದನ್ನು ಕೇಳಿದಾಗ ನನ್ನ ಹೃದಯ ಓಡುತ್ತದೆ ಎಂದು ರಾಧಿಕಾ ಅವರು ರೆಡ್ ಹಾರ್ಟ್ ಎಮೋಜಿ ಹಾಕಿ ದೃಷ್ಟಿ ಎಮೋಜಿ ಹಾಕಿದ್ದಾರೆ. ರಾಧಿಕಾ ಪಂಡಿತ್ ಮಾರ್ಚ್ 7ರಂದು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಪಾರ್ಟಿ ಮಾಡಿದ್ದಾರೆ.
ಆನಂತರ ಖಾಸಗಿ ಹೋಟೆಲ್‌ವೊಂದರಲ್ಲಿ ಗ್ರ್ಯಾಂಡ್ ಆಗಿ ಪತ್ನಿಯ ಹುಟ್ಟುಹಬ್ಬವನ್ನು ಆಪ್ತರ ಸಮ್ಮುಖದಲ್ಲಿ ಯಶ್ ಆಯೋಜಿಸಿದ್ದರು.