ಚೆನ್ನೈ : ತಮಿಳು ನಟ, ದಳಪತಿಗೆ ವಿಜಯ್‌ಗೆ ಪತ್ನಿ ಸಂಗೀತಾ ಶಾಕ್ ಕೊಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥರೂ ಆಗಿರುವ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಸಂಗೀತಾ ಚೆನೈನ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನಟ ವಿಜಯ್ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ಹಿಂದಿನಿಂದಲೂ ಕೂಡ ವಿಜಯ್ ಅವರು ನಟಿಯೋರ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್ ಇತ್ತು.

ಆಗಸ್ಟ್ 1999 ರಲ್ಲಿ ಸಂಗೀತಾ ಹಾಗೂ ವಿಜಯ್ ಮದುವೆಯಾಗಿತ್ತು. ವಿದೇಶದಲ್ಲಿದ್ದ ಸಂಗೀತಾ ಅವರು ವಿಜಯ್ ಅಭಿಮಾನಿಯಾಗಿದ್ದರು. ಹಾಗಾಗಿ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಬಂದಿದ್ದರು. ವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ, ಮದುವೆಯಾಗಿದ್ದರು.
ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ರೂ ಕೂಡ ಹಿಂದೂ ಧರ್ಮದಂತೆ ಮದುವೆಯಾಗಿದ್ದು ವಿಶೇಷ. ಆ ಬಳಿಕ ಕ್ರಿಶ್ಚಿಯನ್ ಸಮುದಾಯದಂತೆ ಮದುವೆಯಾದರು. ಈ ಜೊಡಿಗೆ ಜಾಸೋನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿಯನ್ನು ಭೇಟಿಯಾದ ರಶ್ಮಿಕಾ-ವಿಜಯ್.. ರಿಸೆಪ್ಶನ್ಗೆ ಆಹ್ವಾನ!



















