ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಹಕ್ಕಿ ಆಗಿರುವ ಬೆನ್ನಲ್ಲೇ ಅವರ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ.
ಹರ್ಷವರ್ಧಿನಿ ಎಂದಿದ್ದ ಹೆಸರನ್ನು ಅಭಿನಯ ಚಕ್ರವರ್ತಿ ಸುದೀಪ್ ಬದಲಾಯಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಮಾಧ್ಯಮಗಳ ಮುಂದೆ ನಟಿ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟ ಬರಹಗಾರ ಹಾಗೂ ನಿರ್ದೇಶಕ ರವಿ ಶ್ರೀವತ್ಸ, ಸುದೀಪ್ ಅವರ ಮಾಣಿಕ್ಯ ಚಿತ್ರದಲ್ಲಿ ನಟಿ ರಮ್ಯಾ ಅಭಿನಯ ಮಾಡಬೇಕಾಗಿತ್ತು. ಆದ್ರೆ ಕಾರಣಾಂತರಗಳಿಂದ ಅವರ ನಟಿಸಲಿಲ್ಲ. ಹೀಗಾಗಿ, ಆ ಪಾತ್ರಕ್ಕೆ ಹರ್ಷವರ್ಧಿನಿ ಅವರನ್ನು ಸುದೀಪ್ ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಹರ್ಷವರ್ಧಿನಿ ಬದಲಿಗೆ ರನ್ಯಾ ರಾವ್ ಎಂದು ಸುದೀಪ್ ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ.