ಬೆಂಗಳೂರು: ಹಾಸ್ಯ ನಟನಾಗಿ ಚಂದನವನದಲ್ಲಿ ಜರ್ನಿ ಆರಂಭಿಸಿದ ಶರಣ್ ಎಂಬ ಅತ್ಯದ್ಭುತ ನಟ, ಈಗ ಹೀರೋ ಆಗಿ ತಮ್ಮದೇ ಆದ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಮೇಳೈಸಿಕೊಂಡು ಛಾಪು ಮೂಡಿಸುತ್ತಿದ್ದಾರೆ.
ಈಗ ರಾಮರಸ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಹೊಮ – ಹವನ ಮತ್ತು ಯಜ್ಞಗಳ ಒಡೆಯ ಇಂದ್ರ ದೇವೇಂದ್ರನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜವಾದ ಉದ್ದೇಶವು ಫ್ರಾಂಚೈಸಿಯ ಮುಂದಿನ ಅಧ್ಯಾಯದಲ್ಲಿ ಬಹಿರಂಗವಾಗಲಿದೆ. ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ಹೆಬಾ ಪಟೇಲ್, ಬಾಲಾಜಿ ಮನೋಹರ ಸೇರಿದಂತೆ ಹಲವರು ನಟಿಸಿದ್ದಾರೆ.
ಜಿ ಸಿನಿಮಾಸ್ ಗುರು ದೇಶಪಾಂಡೆ ಪ್ರೊಡಕ್ಷನ್ಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಅಡಿ ಈ ಚಿತ್ರ ಮೂಡಿ ಬಂದಿದೆ. ಗುರು ದೇಶಪಾಂಡೆ, ವಿಕ್ರಂ ಆರ್ಯ ಬಂಡವಾಳ ಹಾಕಿದ್ದಾರೆ. ಬಿ.ಎಂ. ಗಿರಿರಾಜ್ ಕ್ಯಾಪ್ ತೊಟ್ಟಿದ್ದಾರೆ.