ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸದ್ಯದ ಮಾಹಿತಿಯಂತೆ ಸಲ್ಮಾನ್ ಖಾನ್ ಗೆ ಒಟ್ಟು 70 ಜನರಿಂದ ರಕ್ಷಣೆ ನೀಡಲಾಗುತ್ತಿದೆ.
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಮುರುಗದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮುಂದಿನ ಹಂತದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯಲಿದೆ. ಹೀಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಚಿತ್ರೀಕರಣದ ಎಲ್ಲ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಖಾಸಗಿ ಹೋಟೆಲ್ನ ಒಂದು ಭಾಗದಲ್ಲಿ ಮಾತ್ರ ಶೂಟಿಂಗ್ ನಡೆಯಲಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಇಡೀ ಹೋಟೆಲ್ ನ್ನು ಸಲ್ಮಾನ್ ಖಾನ್ ಅವರ ಸೆಕ್ಯೂರಿಟಿ ಟೀಮ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹೋಟೆಲ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ನಂತರ ಎರಡನೇ ಹಂತದಲ್ಲಿ ಸಲ್ಮಾನ್ ಖಾನ್ ಅವರ ಖಾಸಗಿ ಭದ್ರತಾ ತಂಡ ಕೂಡ ತಪಾಸಣೆ ಮಾಡಲಿದೆ.
ಎನ್ಎಸ್ಜಿ ಕಮಾಂಡೋಗಳು, ಪೊಲೀಸ್ ಅಧಿಕಾರಿಗಳು, ಖಾಸಗಿ ಸೆಕ್ಯೂರಿಟಿ ಸಿಬ್ಬಂದಿ ಸೇರಿದಂತೆ ಒಟ್ಟು 70 ಜನರು ಸಲ್ಮಾನ್ ಖಾನ್ ಅವರ ರಕ್ಷಣೆಗೆ ನಿಂತಿದ್ದಾರೆ.