ಕನ್ನಡದ ನಟ ರಿಷಬ್ ಶೆಟ್ಟಿ ಅವರು ಮಂಗಳವಾರ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಈಗ ಆ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ನಡೆದಿದ್ದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಿದರು. ಈ ವೇಳೆ ನಟ ರಿಷಬ್ ಶೆಟ್ಟಿ ಅವರು ‘ಬೆಸ್ಟ್ ಆ್ಯಕ್ಟರ್’ ನ್ಯಾಷನಲ್ ಅವಾರ್ಡ್ ಪಡೆದರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಭಾರೀ ಪ್ರಶಂಗೆ ಪಾತ್ರವಾಗಿರುವ ಕಾಂತಾರ ಚಿತ್ರದ ಅಭಿನಯಕ್ಕಾಗಿ ರಿಷಬ್ ಈ ಪ್ರಶಸ್ತಿ ಪಡೆದರು.
ಪ್ರಶಸ್ತಿ ಸ್ವೀಕರಿಸಿದ ಸಂತಸದಲ್ಲಿರುವ ರಿಷಬ್ ಶೆಟ್ಟಿ ಈ ಪ್ರಶಸ್ತಿಯನ್ನು ಕನ್ನಡಿಗರು, ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರಿಗೆ ಅರ್ಪಿಸಿದ್ದಾರೆ. ಈ ಗೌರವ ಎಲ್ಲವೂ ನಿಮ್ಮದು. ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮೊಂದಿಗೆ ಇದ್ದು ಕಾಂತಾರ ಪ್ರೀತಿಸಿ, ಬೆಳೆಸಿದ್ದಕ್ಕೆ ನಾನು ಇಂದು ಈ ಪ್ರಶಸ್ತಿ ಸ್ವೀಕರಿಸಿದ್ದೇನೆ. ನಿಮ್ಮ ಪ್ರೀತಿಗೆ ಸದಾ ಕೃತಜ್ಞರಾಗಿ ಇರುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೇ, ಈ ಸಂದರ್ಭದಲ್ಲಿ ಕನ್ನಡದ ಹೊಂಬಾಳೆ ಫಿಲ್ಮ್ಸ್ ಗೆ ಕೂಡ ಮೂರು ಪ್ರಶಸ್ತಿಗಳು ಬಂದಿವೆ.