ಹೈದರಾಬಾದ್: ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ ಕೈಗೊಂಡಿದ್ದ 11 ದಿನಗಳ ಪ್ರಾಯಶ್ಚಿತ ಪೂಜೆ ಯಶಸ್ವಿಗೊಂಡಿದೆ.
ಪವನ್ ಕಲ್ಯಾಣ್ ಅವರು ತಮ್ಮ ಮಗಳೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೀಕ್ಷೆಯ ಕೊನೆಯ ದಿನವಾದ ಬುಧವಾರ ಮಧ್ಯಾಹ್ನ ಕೇಸರಿ ಬಟ್ಟೆ ಧರಿಸಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ತೆರಳಿದರು.
ದೇವರ ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಅಧಿಕಾರಿಗಳಿಂದ ಶ್ರೀವಾರಿ ತೀರ್ಥ ಪ್ರಸಾದ ಸ್ವೀಕರಿಸಿದರು. ನಟ ಪವನ್ ಕಲ್ಯಾಣ್ 11 ದಿನ ಉಪವಾಸ ವ್ರತ ಆಚರಿಸಿದ್ದಾರೆ. ಜತೆಗೆ ದೇವಸ್ಥಾನಗಳಲ್ಲಿ ದೈಹಿಕ ಶ್ರಮ ಬಳಸಿ ಮಾಡುವ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ದೇವಸ್ಥಾನಗಳ ಮೆಟ್ಟಿಲುಗಳನ್ನು ನಿತ್ಯ ತೊಳೆದು ಸೇವೆ ಮಾಡಿದ್ದಾರೆ. ಹಲವು ವಿಶೇಷ ಪೂಜೆಗಳನ್ನು ಕೈಗೊಂಡು ದೇವಸ್ಥಾನ ಶುದ್ಧಕಾರ್ಯ ಮಾಡಿದ್ದಾರೆ. ಕೊನೆಯ ದಿನ ತಿರುಮಲಕ್ಕೆ ಭೇಟಿ ನೀಡಿ ದೀಕ್ಷೆ ಪೂರ್ಣ ಮಾಡಿದ್ದಾರೆ.
ಇದು 11 ದಿನಗಳ ಕಾಲ ನಡೆಯುವ ವಿಶೇಷ ಪೂಜೆಯಾಗಿತ್ತು. ಇದರ ಭಾಗವಾಗಿ ನಟ ಪವನ್ ಕಲ್ಯಾಣ್ 11 ದಿನ ಉಪವಾಸ ವ್ರತ ಆಚರಿಸಿದ್ದಾರೆ. ಜತೆಗೆ ದೇವಸ್ಥಾನಗಳಲ್ಲಿ ದೈಹಿಕ ಶ್ರಮ ಬಳಸಿ ಮಾಡುವ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ದೇವಸ್ಥಾನಗಳ ಮೆಟ್ಟಿಲುಗಳನ್ನು ನಿತ್ಯ ತೊಳೆದು ಸೇವೆ ಮಾಡಿದ್ದಾರೆ. ಜತೆಗೆ ಹಲವು ವಿಶೇಷ ಪೂಜೆಗಳನ್ನು ಕೈಗೊಂಡು ದೇವಸ್ಥಾನ ಶುದ್ಧಕಾರ್ಯ ಮಾಡಿದ್ದಾರೆ. ಕೊನೆಯ ದಿನ ತಿರುಮಲಕ್ಕೆ ಭೇಟಿ ನೀಡಿ ದೀಕ್ಷೆಯನ್ನು ಪೂರ್ಣ ಮಾಡಿದ್ದಾರೆ.
ಈ ವಿಷಯವಾಗಿ ಮಾತನಾಡಿದ ಅವರು, ಈ ದೀಕ್ಷೆಯನ್ನು ಕೇವಲ ತಿರುಪತಿ ಲಡ್ಡು ಕಲಬೆರಕೆ ವಿಚಾರಕ್ಕೆ ಮಾತ್ರ ಮಾಡುತ್ತಿಲ್ಲ. ಕಳೆದ ಐದಾರು ವರ್ಷಗಳಿಂದ ಟಿಟಿಡಿಯಲ್ಲಿ ಅನೇಕ ಘಟನೆಗಳು ನಡೆದಿವೆ. ಅವೆಲ್ಲವುಗಳ ರಕ್ಷಣೆಗೆಂದು ದೀಕ್ಷೆ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.