ನಟ ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಆದಾಗಿನಿಂದ ಸಿನಿಮಾದಿಂದ ದೂರ ಇದ್ದರು. ಈಗ ಅವರು ಸಿನಿಮಾಗಳಿಂದ ದೂರವೇ ಇರುವ ನಿರ್ಧಾರ ಘೋಷಿಸಿದ್ದಾರೆ.
ಪವನ್ ಕಲ್ಯಾಣ್ ಈಗ ಜನ ಸೇವೆಯಲ್ಲಿ ಬ್ಯುಸಿ ಇದ್ದಾರೆ. ಇವುಗಳ ಜೊತೆ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಬಹು ವರ್ಷಗಳಿಂದ ಪೆಂಡಿಂಗ್ನಲ್ಲೇ ಉಳಿದುಕೊಂಡಿದ್ದ ‘ಹರಿ ಹರ ವೀರ ಮಲ್ಲು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ.
ನಿರ್ದೇಶಕರು ಹಾಗೂ ನಿರ್ಮಾಪಕರು ಸಾಕಷ್ಟು ಗೋಗರೆದ ಬಳಿಕ ಈ ಚಿತ್ರಕ್ಕಾಗಿ ಅವರು ಸಮಯ ಮೀಸಲಿಟ್ಟು ಚಿತ್ರ ಮಾಡಿಕೊಟ್ಟಿದ್ದಾರೆ. ಇದರ ಪ್ರಚಾರದ ಭಾಗವಾಗಿ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ಶಾಕಿಂಗ್ ನಿರ್ಧಾರ ಘೋಷಿಸಿದ್ದಾರೆ.
‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ಪವನ್ ಕಲ್ಯಾಣ್ ಮಾಡಬೇಕಿದೆ. ಆದರೆ ಅವರ ಬಳಿ ಅದಕ್ಕೆ ಸಮಯ ಇಲ್ಲ. ‘ನಾನು ರಾಜಕೀಯದಲ್ಲಿ ತೊಡಗಿಕೊಂಡಿರುವುದರಿಂದ ಸಿನಿಮಾದಲ್ಲಿ ನಟಿಸಲು ಹೆಚ್ಚು ಸಮಯ ಇಲ್ಲ’ ಎಂದು ಅವರು ಹೇಳಿದ್ದಾರೆ.