ತೆಲುಗು ನಟ ನಾಗಚೈತನ್ಯ (Nagachaitanya) ಐಷಾರಾಮಿ ಕಾರು ಖರಿದಿಸಿದ್ದಾರೆ.
ನಟ ನಾಗಚೈತನ್ಯಗೆ ಕಾರಿನ ಕ್ರೇಜ್ ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಸದ್ಯ ಅದು ಈಗ ಸತ್ಯವಾಗಿದೆ. ದುಬಾರಿಯ ಬೆಲೆಯ ಕಾರೊಂದನ್ನು ನಟ ನಾಗಚೈತನ್ಯ ಖರೀದಿಸಿದ್ದಾರೆ. ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್‌ಎಸ್ ಕಾರನ್ನು ನಾಗಚೈತನ್ಯ ಕೊಂಡುಕೊಂಡಿದ್ದಾರೆ. ನಾಗಚೈತನ್ಯ ಕಾರು ಖರೀದಿಸಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಾಗಚೈತನ್ಯ ಹಲವು ಚಿತ್ರಗಳಲ್ಲಿ ನಟಿಸಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಈಗ ತಾಂಡೆಲ್ ಎಂಬ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಗಚೈತನ್ಯ ಅವರಿಗೆ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿದ್ದಾರೆ. ಅಲ್ಲದೇ, ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಕೂಡ ಇದ್ದಾರೆ.