ಬೆಂಗಳೂರು: ಅನೇಕ ಜನಪ್ರಿಯ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ತಮ್ಮ ಮೊದಲ ಬೈಕ್ ಅಥವಾ ಕಾರನ್ನು ತಮ್ಮ ಬಳಿ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ಏಕೆಂದರೆ ಇವುಗಳೊಂದಿಗೆ ಅವರಿಗೆ ಹಲವಾರು ನೆನಪುಗಳಿರುತ್ತವೆ. ಇತ್ತೀಚೆಗೆ, ಕನ್ನಡ ಭಾಷೆಯ ವಿಚಾರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿರುವ ನಟ ತಮಿಳು ನಟ ಕಮಲ್ ಹಾಸನ್ ಅವರ 1951ರ ಮ್ಯಾಚ್ಲೆಸ್ G3LS ಮೋಟಾರ್ಸೈಕಲ್ನ ಕೆಲವು ಚಿತ್ರಗಳು ವೈರಲ್ ಆಗಿದೆ.
ಕಮಲ್ ಹಾಸನ್ ಅವರ 1951ರ ಮ್ಯಾಚ್ಲೆಸ್ G3LS ಮೋಟಾರ್ಸೈಕಲ್ನ ಚಿತ್ರಗಳನ್ನು ಓಲ್ಡ್ ಮದ್ರಾಸ್ ಮೋಟಾರ್ಸೈಕಲ್ಸ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ, ಕಮಲ್ ಹಾಸನ್ ಅವರು ತಮ್ಮ ಕಚೇರಿಯಲ್ಲಿ ಈ ಮೋಟಾರ್ಸೈಕಲ್ ಜೊತೆಗೆ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ಈ ಬೈಕ್ ಈಗ ಕಪ್ಪು ಬಣ್ಣವಿದೆ. ಆದರೆ ಇದರ ಮೂಲ ಬಣ್ಣ ಕೊಲೋನಿಯಲ್ ಬ್ರೌನ್ ಆಗಿತ್ತು. ಈ ಮೋಟಾರ್ಸೈಕಲ್ ಅನ್ನು ಕಮಲ್ ಹಾಸನ್ ತಮ್ಮ ಯೌವನದ ದಿನಗಳಲ್ಲಿ ಖರೀದಿಸಿದ್ದರು.
ಈ ಮೋಟಾರ್ಸೈಕಲ್ ಅನ್ನು ಅವರು ತಮ್ಮ ಯೌವನದ ದಿನಗಳಲ್ಲಿ ಬಳಸಿದ್ದರು ಮತ್ತು ತಾವು ನಟಿಸಿದ ಹಲವಾರು ಚಿತ್ರಗಳಲ್ಲಿಯೂ ಇದನ್ನು ಬಳಸಿದ್ದರು.
1951ರ ಮ್ಯಾಚ್ಲೆಸ್
ವರ್ಷಗಳಿಂದ, ಕಮಲ್ ಹಾಸನ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಖರೀದಿಸಿದ ಈ ಮೋಟಾರ್ಸೈಕಲ್ನ ಬಗ್ಗೆ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಈ ಬೈಕ್ ದಶಕಗಳಿಂದ ಅವರೊಂದಿಗಿದೆ, ಮತ್ತು ಇದನ್ನು ತಮ್ಮ “ಪ್ರೇಮ ಸಂಬಂಧ” ಮತ್ತು ಯಂತ್ರಗಳು ಮತ್ತು ಹಳಹಳಿಕೆಯ ಉತ್ಸಾಹದ ಸಂಕೇತ ಎಂದು ಅವರು ವಿವರಿಸಿದ್ದಾರೆ.

ಈ ಬೈಕ್ ಮೂಲತಃ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಸೇನೆಗಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಯುದ್ಧಾನಂತರದ ಸಾಮಾನ್ಯ ಮಾದರಿಗಳು ಅನೇಕ ಗಟ್ಟಿಮುಟ್ಟಾದ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದ್ದವು. ಇದು ಟಿಯರ್ಡ್ರಾಪ್ ಇಂಧನ ಟ್ಯಾಂಕ್, ಎಕ್ಸಟರ್ನಲ್ ಎಂಜಿನ್ , ನೆಟ್ಟಗಿನ ಸೀಟ್ ಹೊಂದಿತ್ತು. ಈ ಮೋಟಾರ್ಸೈಕಲ್ಗೆ 348cc, ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಶಕ್ತಿ ನೀಡುತ್ತಿತ್ತು, ಇದು ಸುಮಾರು 16–18 bhp ಉತ್ಪಾದಿಸುತ್ತಿತ್ತು ಮತ್ತು 112–120 ಕಿಮೀ/ಗಂ ಗರಿಷ್ಠ ವೇಗದಲ್ಲಿ ಸಾಗಬಹುದಾಗಿತ್ತು.
ಕಮಲ್ ಹಾಸನ್ “ಥಗ್ಲೈಫ್” ಚಿತ್ರದಲ್ಲಿ ನಟಿಸುತ್ತಿದ್ದಾರೆ
70 ವರ್ಷದ ತಮಿಳು ನಟ ಕಮಲ್ ಹಾಸನ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಥಗ್ಲೈಫ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಸಿಲಂಬರಸನ್, ತ್ರಿಶಾ ಕೃಷ್ಣನ್, ಸನ್ಯಾ ಮಲ್ಹೋತ್ರಾ, ಅಭಿರಾಮಿ, ಅಶೋಕ್ ಸೆಲ್ವನ್, ಐಶ್ವರ್ಯಾ ಲಕ್ಷ್ಮಿ, ಜೋಜು ಜಾರ್ಜ್, ನಾಸರ್, ಅಲಿ ಫಜಲ್, ಪಂಕಜ್ ತ್ರಿಪಾಠಿ, ರೋಹಿತ್ ಸರಾಫ್, ಮತ್ತು ಬಾಬುರಾಜ್ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಈ ಚಿತ್ರದ ಸಹ-ಲೇಖಕರಾಗಿದ್ದಾರೆ. ಸಂಗೀತದ ಕುರಿತು ಹೇಳುವುದಾದರೆ, ಇದನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ನಿರ್ದೇಶಿಸಿದ್ದಾರೆ.

ತಮ್ಮ ಹಳೆಯ ವಾಹನಗಳನ್ನು ಇರಿಸಿಕೊಂಡಿರುವ ನಟರು
ಕಮಲ್ ಅವರಂತೆ ಜನಪ್ರಿಯ ಬಾಲಿವುಡ್ ನಟ ಜಾಕಿ ಶ್ರಾಫ್, ಅಥವಾ “ಜಗ್ಗು ದಾದಾ”, ಫಿಯೆಟ್ 1100 ಅನ್ನು ಹೊಂದಿದ್ದಾರೆ. ಅವರ ವಾಹನವನ್ನು ಬೆಳ್ಳಿ ಬಣ್ಣಕೊಡಲಾಗಿದೆ. . ಅವರು ಈ ವಾಹನದಲ್ಲಿ ಆಗಾಗ ಬಾಲಿವುಡ್ ಪಾರ್ಟಿಗಳಿಗೆ ಹಾಜರಾಗುವುದನ್ನು ಕಾಣಬಹುದು.