ನಾಗಿಣಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ದೀಕ್ಷಿತ್ ಶೆಟ್ಟಿ ದಿಯಾ ಸಿನಿಮಾ ನಂತರ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.ತೆಲುಗಿನ ದಿ ಗರ್ಲ್ ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿರುವ ದೀಕ್ಷಿತ್, 11ವರ್ಷಗಳ ಸಿನಿಮಾ ಜರ್ನಿಯಲ್ಲಿ ಹೊಸ ಹೆಜ್ಜೆಗೆ ಸಜ್ಜಾಗಿದ್ಧಾರೆ.

ದೀ ಸಿನಿಮಾಸ್ ಹೆಸರಿನಲ್ಲಿ ನಟ ದೀಕ್ಷಿತ್ ಹೊಸ ಪ್ರೊಡಕ್ಷನ್ ಹೌಸ್ ಕಟ್ಟಿಸಿದ್ದಾರೆ. ಅಷ್ಟೆ ಅಲ್ಲಾ ಚಿತ್ರರಂಗದಲ್ಲಿ ತಮಗೆ ಬ್ರೇಕ್ ಕೊಟ್ಟ ಬ್ಲಿಂಕ್ ಚಿತ್ರ ತಂಡದೊಂದಿಗೆ ಸೇರಿಕೊಂಡು ತಮ್ಮ ಮೊದಲ ನಿರ್ಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ.